ಹೊನ್ನಾವರ:
ದಿನಾಂಕ: 6-04-2017 ಗುರವಾರ ಸಾಯಂಕಾಲ 6.00 ಗಂಟೆಗೆ ಸಿಲೆಕ್ಟ್ ಪೌಂಡೇಷನ್ (ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾ ಹೊನ್ನಾವರ (ಉ. ಕ.)ದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ -2017ರ ಎರಡನೇ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಪೀಠಾಧೀಶರು ಏಕದಂಡಗಿ ಮಠದ ಪರಮಪೂಜ್ಯ ಕಾಲಹಸ್ತೆಂದ್ರ ಮಹಾ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಕುಮಾರಿ ಕವಿತಾ ದೇವಾಡಿಗರವರು ಸ್ವಾಗತಗೀತೆಯನ್ನು ಹಾಡಿದರು. ಶ್ರೀ ಅಜಿತ್ ನಾಡಿಗ್ ರವರು ಪ್ರಾಸ್ತವಿಕ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸರ್ವರನ್ನು ಸ್ವಾಗತಿಸಿದರು. ಇಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮ ವಿದ್ಯಾಶ್ರಮ ಮೈಸೂರಿನ ಪೂಜ್ಯ ವೇದಾವತಿ ಮಾತಾಜಿ ವಹಿಸಿದರು.
ನಂತರ ಕಾರ್ಯಕ್ರಮದ ಉದ್ಘಾಟಕರಾದ ಪರಮಪೂಜ್ಯ ಕಾಲಹಸ್ತೆಂದ್ರ ಮಹಾ ಸ್ವಾಮಿಜಿಯವರು “ರಾತ್ರಿ ಮಲಗುವುದು ಬೇಡವೆಂದವರೆಲ್ಲ ಬುದ್ಧರಾಗುವರೇನೋ, ಬಂಗಾರ ಬೇಡವೆಂದವರೆಲ್ಲ ಬಸವಣ್ಣರಾಗುವರೇನೋ, ಅಧಿಕಾರ ಬೇಡವೆಂದವರೆಲ್ಲ ಗಾಂಧಿಯಾಗುವರೇನೋ, ವೈರಾಗ್ಯ ಬೇಡವೆಂದವರೆಲ್ಲ ಅಕ್ಕಮಹಾದೇವಿಯಾಗುವರೇನೋ” ಎಂಬ ವಾಣಿಯ ಮೂಲಕ ಬಂಗಾರಮಕ್ಕಿಯಲ್ಲಿ ಸತ್ಯತೆ ಇದೆ, ಮಲೆನಾಡ ಉತ್ಸವವು ಕರುನಾಡ ಉತ್ಸವವಾಗಲಿ ಎಂದು ಹೇಳಿದರು.
ನಂತರ “ ಶ್ರೀ ವೀರಾಂಜನೇಯ ಸೃಜನಶ್ರೀ” ಪ್ರಶಸ್ತಿ ಸನ್ಮಾನಿತರಾದ ಶ್ರಿ ಕೆ.ಪಿ. ಶಂಕರ ಸೋಮಯಾಜಿ, ಆಗಮ ಶಾಸ್ತ್ರ ಪಂಡಿತರು, ಚಿಟ್ಟಾಡಿ, ಉಡುಪಿ, ಇವರು ತಂದೆ-ತಾಯಿಯರು ಕಣ್ಣಿಗೆ ಕಾಣುವ ದೇವರು ನನ್ನ ಶ್ರೇಯೋಭಿವೃದ್ಧಿಗೆ ತಂದೆ-ತಾಯಿಯರೇ ಕಾರಣ, ಉಪಕಾರ ಉಪಚಾರ ಮಾಡುವವರಿಗೆ ಶ್ರೀ ವಿರಾಂಜನೇಯ ಅನುಗ್ರಹಿಸಲಿ ಎಂದು ನುಡಿದರು.
ತದನಂತರ ಶ್ರೀ ಮ.ನಿ.ಪ್ರಾ. ಶಾಂತಲಿಂಗ ಸ್ವಾಮಿಗಳು ಮಾತನಾಡಿ “ಮನಸ್ಸಿಗೆ ನೆಮ್ಮದಿ ಸಮಾಧಾನ ಬೇಕಾದರೆ ಶ್ರೀ ಕ್ಷೇತ್ರ ಬಂಗಾರಮಕ್ಕಿಗೆ ಬನ್ನಿ, ನೆಮ್ಮದಿ ಎಂಬುದು ಶ್ರೀ ಮಾರುತಿ ಗುರೂಜಿಯವರಲ್ಲಿದೆ, ಬಂಗಾರಮಕ್ಕಿ ಕ್ಷೇತ್ರವು ಕಲೆ ಮತ್ತು ಸಂಸ್ಕøತಿಯನ್ನು ಬಿತ್ತರಿಸುವ ಕೇಂದ್ರವಾಗಿದೆ, ಇಂದಿನ ಮಕ್ಕಳಿಗೆ ನಮ್ಮ ದೇಶದ ಸಂಸ್ಕøತಿಯನ್ನು ಕಲಿಸಿ. ಶಿವಪತ ಕಾಣುವುದಾದರೆ ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿಯವರಲ್ಲಿ ಕಾಣಬೇಕು, ಅವರು ಉತ್ತಮ ಮಾರ್ಗದರ್ಶಕರು, ಗುರುವಿನ ಗುಲಾಮರಾಗುವ ತನಕ ದೊರೆಯದಣ್ಣ ಮುಕುತಿ ಎಂದು ನುಡಿದರು.
ನಂತರ ರಾಮಕೃಷ್ಣ ಸಾಧನಾಶ್ರಮ ಶ್ರೀರಂಗಪಟ್ಟಣ ಮಂಡ್ಯದ ಶ್ರೀ ಗಂಗಾದರಾನಂದ ಮಹಾ ಸ್ವಾಮಿಗಳು ಮಾತನಾಡಿ ಕ್ಷೇತ್ರದ ಆರಾಧ್ಯ ದೈವನಾದ ಶ್ರೀ ಆಂಜನೇಯನ ಉದಾಹರಣೆಯನ್ನು ನೀಡುತ್ತ “ ಭಕ್ತನ ಮುಂದೆ ಭಗವಂತನೇ ತಲೆದೂಗುತ್ತಾನೆ” ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷರರಾದ ಪೂಜ್ಯ ವೇದಾವತಿ ಮಾತಾಜಿಯವರು ಪಾಪ-ಪುಣ್ಯ ಕಾರ್ಯಗಳನ್ನು ಮಾಡುವುದು ಮನುಷ್ಯ ಜನ್ಮದಲ್ಲಿ ಮಾತ್ರ, ಆ ಪಾಪದ ಪರಿಹಾರವಾಗಬೇಕಾದರೆ ಶ್ರೀ ಕ್ಷೇತ್ರ ಬಂಗಾರಮಕ್ಕಿಗೆ ಬನ್ನಿ, ಮನುಷ್ಯನ ಆಚಾರ-ವಿಚಾರ ಶುದ್ಧವಾಗಬೇಕಾದರೆ ಪುರುಷಾರ್ಥಗಳನ್ನು ಆಚರಣೆಯಲ್ಲಿ ತರಬೇಕು. “ ಧಮೋ ರಕ್ಷಿತೆ ರಕ್ಷಿತಹ” ಧರ್ಮವನ್ನು ಯಾರು ರಕ್ಷಿಸುತ್ತಾರೋ ಧರ್ಮವು ಅವರನ್ನು ರಕ್ಷಿಸುತ್ತದೆ. ಎಂಬ ವಾಸ್ತವಿಕಾಂಶವನ್ನು ನುಡಿದರು.
ಕೊನೆಯಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರು ನೆರೆದಿರುವ ಸರ್ವ ಭಕ್ತವೃಂದವನ್ನು ಉದ್ಧೇಶಿಸಿ ಭಕ್ತಿಯ ಸಾರವನ್ನು ತಿಳಿಸಿಕೊಟ್ಟರು. “ಭಕ್ತಿ” ಎಂದರೆ ಅಹಂಕಾರ ಅಳಿಸುವುದು, ಭಕ್ತನಲ್ಲಿ ಅಹಂಕಾರ ಅಳಿಯಬೇಕಾದರೆ ಸೇವೆ ಮಾಡಬೇಕು. ಮನುಷ್ಯನ ಜೀವನಕ್ಕೆ ಶಾಂತಿ ನೆಮ್ಮದಿ ಅತ್ಯವಶ್ಯಕವಾದದ್ದು, ಅದಕ್ಕಾಗಿ ಮಾನವ ಪರಿತಪಿಸುತ್ತಾನೆ ಆದರೆ, ಅದು ಮಾನವನಲ್ಲೇ ಅಡಗಿದೆ, ರಾಮಾಯಣ ಓದಿದರೆ ಯಾವ ಕಷ್ಟವೂ ಕಷ್ಟವಲ್ಲ, ಯಾವ ದು:ಖವೂ ದು:ಖವಲ್ಲ “ ನಿನ್ನ ಅರಿವನ್ನು ನಿನಗೆ ಉಂಟುಮಾಡುವುದೇ ಮಾರ್ಗದರ್ಶನ”, “ ಕಲೆ ಮನುಷ್ಯನಿಗೆ ಒಂದು ನೆಲೆಯನ್ನು ಕೊಡುತ್ತದೆ. “ಸೇವಾಹಿ ಪರಮೋಧರ್ಮ” ಎಂದು ಆಶೀರ್ವಚನ ಮಾಡಿದರು.
ಸಭೆಗೆ ಆಗಮಿಸಿರುವ ಗಣ್ಯಾಧಿಗಣ್ಯರನ್ನು ಶ್ರೀ ಗಣಪತಿ ಹೆಗಡೆ ಸಿಲೆಕ್ಟ್ ಪೌಂಡೆಷನ್(ರಿ) ಶ್ರೀ ಕ್ಷೇತ್ರ ಬಂಗಾರಮಕ್ಕಿ ಇವರು ವಂಧನೆಯನ್ನ ಸಲ್ಲಿಸುವುದರೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅನುವು ಮಾಡಿ ಕೊಟ್ಟರು.
ತದನಂತರ ವಿವಿಧ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಹಾಗೂ ಬೆಳಿಗ್ಗೆಯಿಂದ ನಡೆದ ಉಚಿತ ರಕ್ತ ತಪಾಸಣಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಯಶಸ್ವೀಯಾಗಿ ಸಂಪನ್ನಗೊಂಡಿತು.
Leave a Comment