ಜೋಯಿಡಾ.:
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪಣಸೊಳಿಯಲ್ಲಿ ಚಿಕ್ಕ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಜಿಲ್ಲಾ ಉಸ್ತುವರಿ ಸಚಿವ ಆರ್ ವಿ ದೇಶಪಾಂಡೆ ಗುದ್ದಳಿ ಪೂಜೆ ನೆರವೇರಿಸಿದರು.
ಚಿಕ್ಕ ನೀರಾವರಿ ಇಲಾಖೆ ವತಿಯಿಂದ ತಾಲೂಕಿನ ಪಣಸೊಳಿಯಲ್ಲಿ ೪೦ ಲಕ್ಷದ ಸೇತುವೆ ಹಾಗೂ ಬಾಂದಾರ ನಿರ್ಮಾಣ, ಪ್ರಧಾನಿ ಬಳಿ ೪೫ ಲಕ್ಷದ ಕಾಲುವೆ ನಿರ್ಮಾಣ ಹಾಗೂ ಮನಯಿವಾಡದಲ್ಲಿ ೪೫ ಲಕ್ಷ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಸಚಿವ ದೇಶಪಾಂಡೆ ಗುದ್ದಳಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಜೋಯಿಡಾ ತಾಲೂಕನ್ನ ಅಭಿವೃದ್ದಿ ಪಡಿಸಬೇಕು ಅನ್ನೋ ನಿಟ್ಟಿನಲ್ಲಿ ಸಾಕಷ್ಟು ಕಾಮಗಾರಿ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಕಳೆದ ಎರಡು ವರ್ಷದಲ್ಲಿ ತಾಲೂಕಿನಲ್ಲಿ ಸುಮಾರು ೩೫೨ ಕಿಲೋ ಮೀಟರ್ ರಸ್ತೆ ಮಾಡಲಾಗಿದೆ. ಸಿಮೆಂಟ್ ಹಾಗೂ ಡಾಂಬಾರು ರಸ್ತೆ ನಿರ್ಮಾಣದಿಂದ ತಾಲೂಕಿನಲ್ಲಿ ಬಹುತೇಕ ಎಲ್ಲಾ ಕಡೆ ಸಂಪರ್ಕ ಕಲ್ಪಿಸಲು ಉತ್ತಮ ರಸ್ತೆ ನಿರ್ಮಾಣವಾದಂತಾಗಿದೆ. ಇನ್ನು ಉಳಿದಿರುವ ಕಡೆ ಸಹ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇನೆ ಎಂದರು.
ಜೋಯಿಡಾ ತಾಲೂಕಿನಲ್ಲಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಕೋಟ್ಯಾಂತರ ರೂಪಾಯಿ ಹಣವನ್ನ ಸರ್ಕಾರದಿಂದ ತಂದಿದ್ದೇನೆ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೆ ಕಂಡರಿಯದಷ್ಟು ಅಭಿವೃದ್ಧಿ ತಾಲೂಕಿನಲ್ಲಿ ಆಗಿದೆ. ಚಿಕ್ಕ ನೀರಾವರಿ ಇಲಾಖೆಯಿಂದ ತಾಲೂಕಿನಲ್ಲಿ ಮಾಡುತ್ತಿರುವ ಕಾಮಗಾರಿಯಿಂದ ಸುಮಾರು ೨೦೦ ಎಕರೆ ಕೃಷಿ ಭೂಮಿಗೆ ಸಹಾಯವಾಗಲಿದೆ. ಕೃಷಿಕರಿಗೆ ಸಹಾಯವಾಗಲು ಚಿಕ್ಕ ನೀರಾವರಿ ಇಲಾಖೆಯಿಂದ ಯಾವುದೇ ಕಾಮಗಾರಿ ಇದ್ದರು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಕೈಗೆತ್ತುಕೊಳ್ಳಿವಂತೆ ಸಚಿವರು ಸೂಚಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ರಮೇಶ್ ನಾಯ್ಕ್ ಸಂಜಯ್ ಹಣಬರ್, ಪ್ರಧಾನಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷಿ ಬಾರ್ಕೇರ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ಕೃಷ್ಣ ಎಸ್ ದೇಸಾಯಿ, ಕೃಷ್ಣ ಎಂ ದೇಸಾಯಿ, ಪಣಸೋಳಿ ಎಫ್ ಡಿಸಿ ಅಧ್ಯಕ್ಷ ರಾಜಾರಾಮ್ ದೇಸಾಯಿ, ಚಿಕ್ಕ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರ ರಾದ ಕಗಲ್ ಗೊಂಬ, ಸಹಾಯಕ ಅಭಿಯಂತರ ಹೆಚ್ ವಿಶ್ವನಾಥ್, ತಹಶೀಲ್ದಾರ್, ಗುತ್ತಿಗೆದಾರ ಮಾಧವ ನಾಯಕ ಉಪಸ್ಥಿತರಿದ್ದರು.
Leave a Comment