ಕಾರವಾರ:
ಸರ್ಕಾರಿ ಆಡಳಿತದಲ್ಲಿರುವ ಗಣ್ಯರ ಸಂಸ್ಕøತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊದಲ ಸರ್ಜರಿ ನಡೆಸಿರುವ ಕೇಂದ್ರ ಸರ್ಕಾರ, ಪ್ರಧಾನಿ, ರಾಷ್ಟøಪತಿ ಸೇರಿದಂತೆ ಎಲ್ಲ ಗಣ್ಯರ ವಾಹನಗಳ ಮೇಲೆ ಹಾಕಿಕೊಳ್ಳುವುದನ್ನು ನಿರ್ಬಂಧಿಸಿದೆ. ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ಸಂಪುಟ ತೀರ್ಮಾನ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಕೆಂಪುಗೊಟವನ್ನು ತೆಗೆಸುವುದರ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ದಾಖಲೆ ನಿರ್ಮಿಸಿದರು. ಮೇ 1 ರಿಂದ ಜಾರಿಯಾಗುವ ಈ ಹೊಸ ನಿಯಮಕ್ಕೆ ಈಗಲೇ ಕಾರವಾರದ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ತಮ್ಮ ಕಾರಿನಲ್ಲಿರುವ ಕೆಂಪುದೀಪವನ್ನು ತೆಗೆಯುವ ಮೂಲಕ ಸಂಪುಟದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಯಾರು ಬಳಸುವಂತಿಲ್ಲ: ಪ್ರಧಾನಿ, ರಾಷ್ಟøಪತಿ, ಉಪರಾಷ್ಟøಪತಿ, ಮುಖ್ಯ ನ್ಯಾಯಮೂರ್ತಿ, ಕೇಂದ್ರ ಸಚಿವರು, ಲೋಕಸಭೆ ಸ್ಪಿಕರ್, ರಾಜ್ಯ ಸಚಿವರು ಸೇರಿ ಯಾವುದೇ ಗಣ್ಯರೂ ಕೆಂಪುದೀಪ ಅಳವಡಿಸುವಂತಿಲ್ಲ.
ಯಾರಿಗುಂಟು ವಿನಾಯತಿ: ಅಂಬುಲೆನ್ಸ, ಅಗ್ನಿಶಾಮಕ ವಾಹನ ಇತ್ಯಾದಿ ತುರ್ತು ವಾಹನಗಳು ಕೆಂಪುದೀಪದ ಜೊತೆಗೆ ನೀಲಿದೀಪವನ್ನು ಅಳವಡಿಸಿಕೊಳ್ಳಬಹುದು.
ಉಲ್ಲಂಘನೆಗೆ ಕ್ರಮ: ಕಾನೂನಿನ ಪ್ರಕಾರ ಸಚಿವರು ಕೆಂಪುದೀಪವನ್ನು ಬಳಸುವಂತಿಲ್ಲ. ರಕ್ಷಕ ಪೊಲೀಸ್ ವಾಹನಗಳಲ್ಲಿ ಮಾತ್ರ ಕೆಂಪುದೀಪ ಬಳಸಬಹುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಗಡ್ಕರಿ ಎಚ್ಚರಿಸಿದ್ದಾರೆ.
Leave a Comment