ಹೊನ್ನಾವರ:
ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ.
ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ ಇದಾಗಿದೆ. ಅಳಿವೆಯಲ್ಲಿ ಹೂಳು ತುಂಬಿದ ಕಾರಣ ಸಮುದ್ರಕ್ಕೆ ಹೆದರದೇ ಇದ್ದ ಮೀನುಗಾರರು ಅಳವೆಗೆ ಹೆದರಿ ಪ್ರಾಣಭೀತಿಯೊಂದಿಗೆ ವ್ಯವಹರಿಸುತ್ತಿದ್ದಾರೆ. ಪರಿಹಾರ ಮರೀಚಿಕೆಯಾಗಿದೆ.
Leave a Comment