• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ

May 2, 2017 by Yuvagni News Leave a Comment

ಕಾರವಾರ:

ಹರಪನಹಳ್ಳಿಯ ಮಹಿಳಾ ಕಲಾವಿದರು ಕಾರವಾರದ ಕಡಲತೀರದ ಬಯಲು ವೇದಿಕೆಯಲ್ಲಿ ಪ್ರದರ್ಶಿಸಿದ ಉತ್ತರ ಕರ್ನಾಟಕದ ಜಾನಪದ ಕಲೆ ಬಯಲಾಟ ಏಕಲವ್ಯ ಗಮನ ಸೆಳೆಯಿತು.
ಸಮಸ್ತರು ಸಾಂಸ್ಕøತಿ ಸಂಘ ಹರಪನಹಳ್ಳಿಯ ಮಹಿಳಾ ಕಲಾವಿದರು ಏಲಕವ್ಯ ಬಂiÀiಲಾಟ ಪ್ರದರ್ಶಿಸುವ ಮೂಲಕ ಕರಾವಳಿಯ ಜನತೆಗೆ ಬಯಲಾಟದ ಮೂಲ ನೆಲದ ಕಲೆಯನ್ನು ಪರಿಚಯಿಸಿದರು. ಜಿಲ್ಲಾಡಳಿತ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಾಗೂ ರವೀಂದ್ರನಾಥ ಟ್ಯಾಗೋರ ಅಭಿವೃದ್ಧಿ ಸಮಿತಿ, ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.
ವಿಶಿಷ್ಟ ಕುಣಿತ ಮತ್ತು ವಿಶೇಷ ಜಾನಪದ ಸಂಗೀತ ಹಿನ್ನೆಲೆಯ ಬಯಲಾಟದ ಏಕಲವ್ಯ ಡಾ.ಸಿದ್ದಲಿಂಗಯ್ಯ ಅವರ ವೈಚಾರಿಕತೆಯಲ್ಲಿ ರಚನೆಯಾದುದು. ಈ ನಾಟಕವನ್ನು ಬಯಲಾಟದ ಪ್ರಕಾರಕ್ಕೆ ದುಡಿಸಿಕೊಂಡವರು ನಿರ್ದೇಶಕ ಬಿ.ಪರುಶುರಾಮ. ನಾಟಕದಲ್ಲಿ ದ್ರೋಣನ ಪಾತ್ರ ಮಾಡಿದ ಏಕೈಕ ಪುರುಷ ಕಲಾವಿದೆ. ಉಳಿದಂತೆ ಏಕಲವ್ಯ ಪಾತ್ರವನ್ನು ಸವಿತಾ, ಅರ್ಜುನನ ಪಾತ್ರವನ್ನು ಶಿಲ್ಪಾ ಮೈದೂರು, ಕೃಷ್ಣನ ಪಾತ್ರವನ್ನು ಶ್ವೇತಾ ಹರಪನಹಳ್ಳಿ, ಕರ್ಣ, ದುರ್ಯೋಧನ ಭೀಮ, ಬೇಡ ಜನರ ಪಾತ್ರಗಳು ಸೇರಿದಂತೆ ಉಳಿದೆಲ್ಲಾ ಪಾತ್ರಗಳನ್ನು ಯುವತಿಯರು ನಿರ್ವಹಿಸಿದರು.
ವಿದ್ಯೆ ಎಂಬುದು ಶೂದ್ರ ವರ್ಗಕ್ಕೆ ದೂರವೇ ಆಗಿದ್ದ ಕಾಲದಲ್ಲಿ ದ್ರೋಣಾಚಾರ್ಯರ ಅರ್ಜುರ್ನನ ಕರ್ಣರಿಗೆ ಕಲಿಸುವ ಬಿಲ್ವ ವಿದ್ಯೆಯ ದೂರದಿಂದಲೇ ಗ್ರಹಿಸಿದ ಏಕಲವ್ಯ ದ್ರೋಣಚಾರ್ಯ ಮೆಚ್ಚುವಂತ ಶಿಷ್ಯನಾದ. ಬಿಲ್ವ ವಿದ್ಯೆ ಎಂಬುದು ಸಮುದಾಯ ಮತ್ತು ಕಾಡಿನ ರಕ್ಷಣೆಗೆ ಎಂದು ನಂಬಿದವನು ಏಕಲವ್ಯ, ಕೌರವ ಮತ್ತು ಪಾಂಡವರ ಆಡಳಿತ ಮತ್ತು ಅಧಿಕಾರ ದಾಹಕ್ಕೆ ಹಾಗೂ ಹಿತಾಸಕ್ತಿಗೆ ನಾನು ದಾಳವಾಗಲಾರೆ ಎಂಬ ಮಾತನ್ನು ಏಕಲವ್ಯ ಆಡುವ ಮೂಲಕ ನಾಟಕದ ಮೂಲ ಉದ್ದೇಶವನ್ನು ಹಾಗೂ ಸಂದೇಶವನ್ನು ಈ ಬಯಲಾಟ ನೀಡಿತು. ಒಂದು ಶೋಷಿತ ಜನಾಂಗ ಸಹ ಪ್ರಯತ್ನದಿಂದ ಮುಂದೆ ಬರಬಹುದು. ಯಾವುದೇ ವಿದ್ಯೆಯಾಗಲಿ ಯಾವ ಜನಾಂಗದ ಸ್ವತ್ತು ಅಲ್ಲ. ವಿದ್ಯೆಯನ್ನು ಸಮುದಾಯದ ಬೆಳವಣಿಗೆಗೆ ಬಳಸಬೇಕು. ಹಾಗೂ ಯಾವುದೇ ಜನಾಂಗದ ಸಾಧಕರನ್ನು ಆಯಾ ಜಾತಿಯ ನೆಲೆಯಲ್ಲಿ ನೋಡದೇ ಅವರು ಹೇಳಿದ ಸಂದೇಶ ಮತ್ತು ಜೀವನ ವಿಧಾನವನ್ನು ಸಮುದಾಯಕ್ಕೆ ನೀಡಬೇಕು ಎಂಬ ಜಾಗೃತಿಯನ್ನು ಈ ಬಯಲಾಟ ಸಾರಿತು. ಸಮಸ್ತರು ಹರಪನಹಳ್ಳಿ ಹವ್ಯಾಸಿ ನಾಟಕ ತಂಡ ಬಯಲಾಟ ಪ್ರಕಾರವನ್ನು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಬಯಲಾಟ ಪ್ರಕಾರವನ್ನು ಮತ್ತೆ ಜೀವಂತವಾಗಿ ಇಡಲು ಈ ಸಂಚಾರವನ್ನು ಆರಂಭಿಸಿದ್ದು, ಕಾರವಾರದಲ್ಲಿ ತನ್ನ ಎರಡನೇ ಪ್ರದರ್ಶನವನ್ನು ನೀಡಿತು.
ಅಪರೂಪಕ್ಕೆ ನಡೆದ ಬಯಲಾಟದ ಸವಿಯನ್ನು ಕರಾವಳಿಯ ಜನತೆ ಸಂಭ್ರಮ ಮತ್ತು ಕುತೂಹಲದಿಂದಲೇ ವೀಕ್ಷಿಸಿದರು. ಬಯಲಾಟದ ವೇಷಭೂಷಣ ಮತ್ತು ಹಾಡುಗಳ ಬಗ್ಗೆ , ಹೆಜ್ಜೆ ಹಾಕುವ ಬಗೆಯ ಕುರಿತು ಪ್ರಶಂಸೆ ವ್ಯಕ್ತವಾಯಿತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಉತ್ತರ, ಕಡಲ, ಕರ್ನಾಟಕ, ಕಲೆ, ಕಾರವಾರ, ಜಾನಪದ, ತೀರ, ಪ್ರದರ್ಶಿಸಿದ, ಬಯಲು, ಮಹಿಳಾ, ವೇದಿಕೆ, ಹರಪನಹಳ್ಳಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar