ಕಾರವಾರ:
ಕಾರವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಆಸಕ್ತಿಯುಳ್ಳ ಮತ್ತು ಅನುಭವವುಳ್ಳ ವಿಕಲಚೇತನರಿಂದ ಕ್ಯಾಂಟೀನ್ ನಡೆಸಲು ಅರ್ಜಿಗಳನ್ನು ಆಹ್ವಾನಿಸಿದೆ.. ಆಸಕ್ತಿಯುಳ್ಳ/ಅನುಭವವುಳ್ಳ ವಿಕಲಚೇತನರು ತಮ್ಮ ಅರ್ಜಿಗಳನ್ನು ಮೇ 19 ಒಳಗಾಗಿ ತಮ್ಮ ಸಂಪೂರ್ಣ ದಾಖಲಾತಿಗಳೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ, ರವರ ಕಛೇರಿಗೆ ಸಲ್ಲಿಸುವುದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ, ರವರಿಂದ ಕಛೇರಿಯ ಸಮಯದಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ತಿಳಿಸಿದಾರೆ
Leave a Comment