ಹೋನ್ನಾವರ:
ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಡ್ರೈನೇಜ್ ಪೈಪ್ ಅಳವಡಿಸುವ ಕೆಲಸದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಆಳದ ಗುಂಡಿಗಳನ್ನು ತೆಗೆದು ಮಣ್ಣಿನಿಂದ ಮುಚ್ಚಲಾಗಿದೆ.
ಮಳೆಗಾಲ ಹತ್ತಿರವಾದರೂ ರಸ್ತೆಯನ್ನು ರಿಪೇರಿ ಮಾಡದೇ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ.
ಮಳೆಗಾಲದಲ್ಲಿ ಮಳೆಯ ನೀರು ರಸ್ತೆಯ ಪಕ್ಕದಲ್ಲಿ ಹರಿಯುವುದು ಬಿಟ್ಟು ರಸ್ತೆಯ ಮಧ್ಯ ಭಾಗದಲ್ಲಿ ಹರಿದು ಆಳದ ಹೋಂಡ ಬೀಳುವುದು ಖಾತ್ರಿಯಾಗಿದೆ.
ಇದರಿಂದ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಓಡಾಡಲು ಬಹಳ ತೋಂದರೆಯಾಗಲಿದೆ.
ಆದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ರಸ್ತೆ ದುರಸ್ತಿಯನ್ನು ಮಾಡಬೇಕೆಂದು ವಿನೋದ ನಾಯ್ಕ ರಾಯಲ್ಕೇರಿ ಆಗ್ರಹಿಸಿದ್ದಾರೆ.
ಒಂದು ವಾರದೋಳಗೆ ರಸ್ತೆ ರಿಪೇರಿ ಮಾಡದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
Leave a Comment