ಕಾರವಾರ:
“ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ (cmegp) ಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕಾರವಾರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಸದ್ರ್ರಿ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕಗಳನ್ನು ಪ್ರಾರಂಭಿಸುವ ಕುರಿತು ಸಾಲ ಪಡೆಯಲು ಇಚ್ಛಿಸುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಘಟಕದ ಗರಿಷ್ಠ ಯೋಜನಾ ವೆಚ್ಚ ರೂ.10.00 ಲಕ್ಷ ಆಗಿರುತ್ತದೆ. ಸಾಮಾನ್ಯ ಅಭ್ಯರ್ಥಿಗಳಿಗೆ 21 ರಿಂದ 35 ವರ್ಷ ವಯೋಮಿತಿ, ಪ.ಜಾತಿ/ಪ.ಪಂ. ಮಹಿಳೆ, ಓ.ಬಿ.ಸಿ., ಅಲ್ಪಸಂಖ್ಯಾತರು, ಮಾಜಿ ಸೈನಿಕರು, ಅಂಗವಿಕಲರು ಗರಿಷ್ಠ 45 ವರ್ಷ ವಯೋಮಿತಿ. ಅಭ್ಯರ್ಥಿಗಳು 8 ನೇ ತರಗತಿ ಪಾಸಾಗಿರಬೇಕು. ಅರ್ಜಿಯನ್ನು http://www.cmegp.kar.nic.in/ ನಲ್ಲಿ ಆನ್ಲೈನ್ ಮೂಲಕ ಭರ್ತಿ ಮಾಡಲು ಕೊನೆಯ ದಿ:12-06-2017 ಆಗಿರುತ್ತದೆ. ಆನ್ಲೈನ್ ಮೂಲಕ ಭರ್ತಿ ಮಾಡಿ ಪಡೆದ ಅರ್ಜಿಯ ಪ್ರತಿಯನ್ನು ದ್ವಿ-ಪ್ರತಿಯಲ್ಲಿ ವೆಬ್ಸೈಟ್ನಲ್ಲಿ ಸೂಚಿಸಿದ ಎಲ್ಲಾ ದಾಖಲೆಗಳನ್ನು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ಅಥವಾ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಡಾ|| ಪಿಕಳೆ ರಸ್ತೆ, ಕಾರವಾರ ರವರಿಗೆ ಜೂನ 17 ರೊಳಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿರವಾಡ, ಕಾರವಾರ ಕಛೇರಿ ದೂರವಾಣಿ ಸಂಖ್ಯೆ 08382- 282302, 282367, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಾರವಾರ ಕಛೇರಿ, ದೂರವಾಣಿ ಸಂಖ್ಯೆ: 08382-226506 ಅಥವಾ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Leave a Comment