ದಾಂಡೇಲಿ :
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಮತ್ತು ಬಿ.ಕಾಂ 2017-18 ನೇ ಸಾಲಿನ ಪದವಿ ತರಗತಿಗಳಿಗೆ ಪ್ರವೇಶ ಆರಂಭವಾಗಿದ್ದು, ಮೇ 25 ರಿಂದ ಕಾಲೇಜಿನ ಕಾರ್ಯಾಲಯದಲ್ಲಿ ಪ್ರವೇಶದ ಅರ್ಜಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಪಿಯುಸಿ ಪಾಸಾದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರವೇಶ ಅರ್ಜಿ ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 7 ರೊಳಗಾಗಿ ಕಾರ್ಯಾಲಯದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇತ್ತೀಚೆಗೆ ಕಾಲೇಜು ಸರ್ಕಾರದ ಪ್ರೇರಣೆ ಮತ್ತು ಅನುದಾನದಿಂದ ಸಾಕಷ್ಟು ಪ್ರಗತಿ ಮತ್ತು ಬೆಳವಣಿಗೆಯನ್ನು ಹೊಂದುತ್ತಿದೆ. 2013 ರಲ್ಲಿ ಆರಂಭಗೊಂಡ ಕಾಲೇಜು ದಾಂಡೇಲಿ ನಗರ ಪ್ರದೇಶದಲ್ಲಿ, ಅದರಲ್ಲೂ ಮಲೆನಾಡಿನ ಮಡಿಲಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಾಲೇಜಿನಲ್ಲಿ ಬಿ.ಎ ಮತ್ತು ಬಿ.ಕಾಂ ಕೋರ್ಸ್ಗಳು ಲಭ್ಯವಿರುತ್ತದೆ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಸೌಲಭ್ಯ. ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕ ವಿನಾಯಿತಿ ಇರುತ್ತದೆ. ವಿದ್ಯಾರ್ಥಿಗಳಿಗೆ ವ್ಯಕ್ತಿಗತ ಕಾಳಜಿ. ನುರಿತ ಅನುಭವಿ ಪ್ರಾಧ್ಯಾಪಕರಿಂದ ಪಾಠ ಭೋಧನೆ.ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಟೆಲಿ ಎಜ್ಯುಕೇಶನ್ ಸೌಲಭ್ಯವಿರುತ್ತದೆ ಮತ್ತು ಉತ್ತಮ ಗ್ರಂಥಾಲಯ ಹಾಗೂ ಕಂಪ್ಯೂಟರ್ ಶಿಕ್ಷಣದ ಸೌಲಭ್ಯವನ್ನು ಕಾಲೇಜು ಒಳಗೊಂಡಿರುತ್ತದೆ. ದಾಂಡೇಲಿ ಸುತ್ತಮುತ್ತಲಿನ ಪದವಿಪೂರ್ವ ಶಿಕ್ಷಣವನ್ನು ಹೊಂದಿರುವ ವಿದ್ಯಾರ್ಥಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಾಚಾರ್ಯ ಡಾ: ನಾಸೀರ ಅಹ್ಮದ ಜಂಗೂಭಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: 08284-233660, ಮೊ: 9481109716 ಸಂಪರ್ಕಿಸುವಂತೆ ಕೋರಲಾಗಿದೆ.
Leave a Comment