ಕಾರವಾರ:
ವಿಶ್ವ ಡೆಂಗ್ಯೂ ದಿನಾಚರಣೆಯ ನಿಮಿತ್ತ ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಿಂದ ನಡೆದ ಜಾಥಾಗೆ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಚಾಲನೆ ನೀಡಿದರು.
” ಇಂಡಿಯಾ ಫೈಟ್ಸ್ ಡೆಂಗ್ಯೂ ” ಎಂಬ ಘೋಷ ವಾಕ್ಯಯೊಂದಿಗೆ ಜಾಥಾ ಮೇರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಮೆರವಣಿಗೆಯಲ್ಲಿ ನರ್ಸಿಂಗ್ ವಿದ್ಯಾಥಿಗಳು ‘ಸಣ್ಣ ಕೀಟ್ ಬಾರಿ ಅಪಾಯ’ ಡೆಂಗಿ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ ಎಂದು ಡೆಂಗ್ಯೂ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರಕಾರಿ ಜಿ.ಎನ್.ಎಮ್ ನರ್ಸಿಂಗ್ ಕಾಲೇಜು, ಆಝಾದ ಯುತ್ ಕ್ಲಬ್, ಕೆ.ಡಿ.ಸಿ.ಸಿ ಸಂಸ್ಥೆ, ಬಾಪೂಜಿ ನರ್ಸಿಂಗ್ ವಿದ್ಯಾಲಯ ಮತ್ತು ಜನವಿಕಾಸ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜಾಥಾ ಹಮ್ಮಿಕೊಳ್ಳಲಾಯಿತು.
Leave a Comment