ದಾಂಡೇಲಿ:
ಇಂದು ಶುಕ್ರವಾರ ಮೇ: 26 ರಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ದಾಂಡೇಲಿ ನಗರ ವ್ಯಾಪ್ತಿ, ಆಲೂರು, ಅಂಬಿಕಾನಗರ, ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ನಗರದ ಅಂಬೇವಾಡಿಯಲ್ಲಿರುವ ವಿದ್ಯುತ್ ಸರಬರಾಜು 220 ಕೆವಿ ಉಪಕೇಂದ್ರದಲ್ಲಿ ಮಳೆಗಾಲ ಆರಂಭವಾಗುವ ಮುಂಚಿನ ನಿರ್ವಹಣೆ ಮತ್ತು ಎಲ್ಲಾ 11 ಕೆವಿ ವಿದ್ಯುತ್ ಮಾರ್ಗಗಳ ನಿರ್ವಹಣೆ, ದುರಸ್ತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹು.ವಿ.ಸ.ಕಂ.ನಿಗಮದ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರÀರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave a Comment