ಕಾರವಾರ:
ಬೈಕ್ ಸವಾರರೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅರಗಾದಲ್ಲಿ ನಡೆದಿದೆ.
ಇಲ್ಲಿನ ಪತಂಜಲಿ ಆಸ್ಪತ್ರೆಗೆ ತೆರಳುತ್ತಿದ್ದ ಕದಂಬ ನೌಕಾನೆಲೆ ಉದ್ಯೋಗಿ ನರೇಶ ಕುಮಾರ್ ಸಿಂಗ್ (23)ಗೆ ಅಂಕೋಲಾ ಮಾರ್ಗದಿಂದ ಬಂದ ಸೀಬರ್ಡ ಬಸ್ ಹಿಂದಿನಿಂದ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ನುಚ್ಚುನೂರಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣಾ ಪೊಲೀಸರು ಬಸ್ ಚಾಲಕನಾದ ಬಾಗಲಕೋಟೆ ಮೂಲದ ಈರಭದ್ರಯ್ಯ ನಾಗಯ್ಯ ನಾಗೇನವರಮಠ ಎಂಬಾತರನ್ನು ಬಂಧಿಸಿದ್ದಾರೆ.
Leave a Comment