ಭಟ್ಕಳ:
ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2017-18ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು.
2017-18ನೇ ಸಾಲಿನ ತಾಲೂಕಾ ಪಂಚಾಯತ್ನ ರೂ.4285.48 ಲಕ್ಷ ರೂಪಾಯಿಯ ಮುಂಗಡ ಪತ್ರದಲ್ಲಿ ಹೆಚ್ಚಿನ ಪಾಲು ಶಿಕ್ಷಕರ ಮತ್ತು ತಾ.ಪಂ. ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ, ಭತ್ಯೆ ಇತ್ಯಾದಿ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಇಲಾಖೆಯ ವಸತಿ ನಿಲಯಗಳ ನಿರ್ವಹಣೆ, ವಿದ್ಯಾರ್ಥಿ ವೇತನ ಒಳಗೊಂಡಿದೆ.
ಕಳೆದ ಸಾಲಿಗೆ ಹೋಲಿಸಿದಲ್ಲಿ ಮುಂಗಡ ಪತ್ರವು ಶೇ.3.84 ರಷ್ಟು ಹೆಚ್ಚಿಗೆಯಾಗಿದ್ದು ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ, ಪ್ರಾಥಮಿಕ ಶಿಕ್ಷಣಕ್ಕಾಗಿ ಒಟ್ಟೂ ರೂ.2250.30 ಲಕ್ಷ ಅನುದಾನ ಮೀಸಲಿಡಲಾಗಿದ್ದು ಪ್ರೌಢ ಶಿಕ್ಷಣದ ಶಿಕ್ಷಕರ ವೇತನ ಮತ್ತು ಭತ್ಯೆಗಳ ಸಲುವಾಗಿ ರೂ.365.51 ಲಕ್ಷ ಹಾಗೂ ವೇತನ ಹೊತರುಪಡಿಸಿ ಇತರೇ ವೆಚ್ಚಕ್ಕಾಗಿ ರೂ.5.26 ಲಕ್ಷ ಅನುದಾನವನ್ನು ನಿಗದಿಪಡಿಸಲಾಗಿದೆ. ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದ ಶಿಕ್ಷಕರ ವೇತನ ಮತ್ತು ಭತ್ಯೆಗಾಗಿ ರೂ.496.40 ಲಕ್ಷ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯ ಶಿಕ್ಷಕರ ವೇತನ ಮತ್ತು ಭತ್ಯೆಗಾಗಿ ರೂ.101.82 ಲಕ್ಷ ಮೀಸಲಿರಿಸಲಾಗಿದೆ. ವೈದ್ಯಕೀಯ ವiತ್ತು ಜನಾರೋಗ್ಯ ಲೆಕ್ಕ ಶೀರ್ಷಿಕೆಗಳಡಿ ರೂ.17.80 ಲಕ್ಷ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ ಕಾರ್ಯಕ್ರಮಕ್ಕೆ ರೂ. 9.65 ಲಕ್ಷ ಅನುದಾನ ಹಾಗೂ ಪರಿಶಿಷ್ಟ ಪಂಗಡದವರಿಗಾಗಿ ರೂ. 11.30 ಲಕ್ಷ ಮೀಸಲಿಡಲಾಗಿದೆ. ಹಿಂದುಳಿದ ವರ್ಗ ಇಲಾಖೆಗೆ ವಿವಿಧ ಕಾರ್ಯಕ್ರಮದಡಿಯಲ್ಲಿ ರೂ.23.90 ಲಕ್ಷ ಅನುದಾನ ಮೀಸಲಿಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಡಿಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ರೂ. 0.10 ಲಕ್ಷ ಕಾಯ್ದಿರಿಸಲಾಗಿದೆ. ಪ.ಜಾತಿ/ ವರ್ಗಗಳ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಕ್ಕಾಗಿ ವಿಶೇಷ ಘಟಕ ಯೋಜನೆಯಲ್ಲಿ ರೂ.0.28 ಲಕ್ಷ ಒದಗಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ರೂ.632.79 ಲಕ್ಷ ಅನುದಾನ ಕಲ್ಪಿಸಲಾಗಿದೆ. ಕೃಷಿ ವಲಯಕ್ಕೆ 2017-18 ನೇ ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ರೂ.16.85 ಲಕ್ಷ ಅನುದಾನ ಕಲ್ಪಿಸಿದೆ. ತೋಟಗಾರಿಕಾ ಇಲಾಖೆಗೆ ರೂ. 0.58 ಲಕ್ಷ ಅನುದಾನ ನಿಗದಿಪಡಿಸಿದ್ದು, ಇದರಲ್ಲಿ ರೈತರ ತರಬೇತಿಗೆ ರೂ.0.28 ಲಕ್ಷ ಹಾಗೂ ರೈತರಿಗೆ ಸಹಾಯಕ್ಕಾಗಿ ರೂ.0.30 ಲಕ್ಷ ಅನುದಾನ ಕಲ್ಪಿಸಲಾಗಿದೆ. ಪಶು ಸಂಗೋಪನಾ ಇಲಾಖೆಗೆ ವಿವಿಧ ಕಾರ್ಯಕ್ರಮಗಳಡಿಯಲ್ಲಿ ರೂ. 62.06 ಲಕ್ಷ ಅನುದಾನ ಕಲ್ಪಿಸಲಾಗಿದೆ. ಮಹಿಳಾ ಸಹಕಾರಿ ಸಂಘಗಳಿಗೆ ಸಾಲ ಮತ್ತು ವ್ಯವಹಾರ Pಟ್ಟಡಗಳ ನಿರ್ಮಾಣ ಕಾರ್ಯಕ್ರಮಕ್ಕಾಗಿ ರೂ. 1.90 ಲಕ್ಷ ಅನುದಾನ ಮೀಸಲಿಡಲಾಗಿದೆ. ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿ ತಾಲೂಕಾ ಪಂಚಾಯತಕ್ಕೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.108.00 ಲಕ್ಷ ಅನುದಾನ ಒದಗಿಸಲಾಗಿದ್ದು, ಅಭಿವೃದ್ಧಿ ಅನುದಾನ ರೂ. 5.00 ಲಕ್ಷ, ಗ್ರಾಮೀಣ ಪರಿಮಿತಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣಕ್ಕಾಗಿ ರೂ. 3.00 ಲಕ್ಷ ಅನುದಾನ ಹಾಗೂ ತಾಲೂಕಾ ಪಂಚಾಯತಿಗಳಿಗೆ ಸಂಯುಕ್ತ ಅನುದಾನವೆಂದು ರೂ. 100.00 ಲಕ್ಷ ನಿಗದಿಪಡಿಸಲಾಗಿದೆ. ತಾಲೂಕು ಪಂಚಾಯತಿಯ ಇತರ ಕಾರ್ಯಕ್ರಮಗಳಿಗೆ ಒಟ್ಟು ರೂ.123.58 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ತಾಲೂಕ ಪಂಚಾಯತ್ ನಿಧಿಯಿಂದ ವೇತನ ಪಡೆಯುವ ಇಲಾಖೆಗಳಿಗಾಗಿ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ರೂ.57.50 ಲಕ್ಷ ಕಾಯ್ದಿರಿಸಲಾಗಿದೆ.
Leave a Comment