ಕಾರವಾರ:
ಜಿಲ್ಲೆಯಾದ್ಯಂತ ತಲೆದೂರಿರುವ ಮರಳು ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ಘಟಕದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಪರವಾನಿಗೆ ಸಿಕ್ಕರೂ ಮರಳು ಸಮಸ್ಯೆ ಬಗೆಹರಿದಿಲ್ಲ. ಎಲ್ಲಡೆ ದುಪ್ಪಟ್ಟು ಹಣಕ್ಕೆ ಮರಳನ್ನು ಮಾರಾಟ ಮಾಡಲಾಗುತ್ತಿದೆ. ಜನ ಸಾಮಾನ್ಯರ ಮನೆ ಕೆಲಸಕ್ಕೂ ಮರಳಿನ ಅಭಾವ ತಲೆ ದೂರಿದ್ದು, ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ ಎಂದು ವಿವರಿಸಿದರು. ರಾಜ್ಯದಲ್ಲಿ ಸಚಿವರ ಪುತ್ರರೊಬ್ಬರು ಮರಳು ದಂದೆ ನಡೆಸುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು. ಬಡವರು ಮರಳು ಸಾಗಾಟ ಮಾಡಿದರೆ ಅದನ್ನು ತಡೆಯುವ ಜಿಲ್ಲಾಡಳಿತ ಶ್ರೀಮಂತರು ಅಕ್ರಮ ದಂದೆ ನಡೆಸಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮಾರಾವ ರಾಯ್ಕರ್, ಪ್ರಮುಖರಾದ ಮನೋಜ ಭಟ್ಟ, ಪ್ರಶಾಂತ ಗಾಂವ್ಕರ್, ಉದಯ ಬಶೆಟ್ಟಿ, ಮಧುಕರ ದೇವಿದಾಸ, ಗುರುನಾಥ ಕೋಠಾರಕರ ಇತರರಿದ್ದರು.
Leave a Comment