ಕಾರವಾರ:
ವಿವಿಧ ಇಲಾಖೆಗಳ ಆಶ್ರಯದಲ್ಲಿ ಅಮದಳ್ಳಿಯ ಬಂಟದೇವ ಯುವಕ ಸಂಘದವರು ವಿವಿಧಡೆ ಕೃಷಿ ಸಾಧನೆ ಕುರಿತು ಸಾಂಸ್ಕøತಿಕ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಿದರು.
ಸಾತಗೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಮಂಜುನಾಥ ಕೆ ಮುದ್ಘೇಕರ್ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕೃಷಿಗೆ ಸರ್ಕಾರ ನೀಡುತ್ತಿರುವ ಸಾಲ-ಸೌಲಭ್ಯಗಳು, ತರಬೇತಿ-ಮಾರ್ಗದರ್ಶನಗಳು, ಕೃಷಿಯಲ್ಲಿ ನೀರಿನ ಮಿತ ಹಾಗೂ ಸಮರ್ಪಕ ಬಳಕೆ, ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ಬಗ್ಗೆ ಹಾಡು, ನೃತ್ಯ, ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ನವದೆಹಲಿ, ಕೃಷಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ನಡೆದವು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪಾ ಗೌಡ, ಜಿ ಎನ್ ಗುಡಿಗಾರ, ಅರುಣ ಶೆಟ್ಟ ಇತರರು ಭಾಘವಹಿಸಿದ್ದರು.
Leave a Comment