ಕಾರವಾರ:
ಸೋಮವಾರ ಸಂಜೆ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಪರದೇಶದ ಹಡಗೊಂದು ಭಾರತದ ರಾಷ್ಟ್ರದ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ಅದನ್ನು ಸರಿಪಡಿಸಿ ಹಡಗಿನ ಕ್ಯಾಪ್ಟನ್ ಕ್ಷಮೆಯಾಚಿಸಿದ ನಂತರ ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳಲಾಯಿತು. ರಾಷ್ಟ್ರದ್ವಜಕ್ಕೆ ಅಗೌರವ ಸೂಚಿಸಿದ ವಿದೇಶಿ ಪ್ರಜೆಗಳಿಗೆ ಬಂದರು ಇಲಾಖೆ ಅಧಿಕಾರಿಗಳು ಶಿಸ್ತಿನ ಪಾಠ ಹೇಳಿದರು.
ಅರಬ್ ರಾಷ್ಟ್ರವೊಂದರಿಂದ ಡಾಂಬರನ್ನು ತುಂಬಿಕೊಂಡು ಬಂದಿದ್ದ ಹಡಗು ಲೈಟ್ಹೌಸ್ ಬಳಿ ತಲುಪಿದಾಗ ತಮ್ಮನ್ನು ಕಾರವಾರ ವಾಣಿಜ್ಯ ಬಂದರಿಗೆ ತಲುಪಿಸಲು ಟಗ್ ವ್ಯವಸ್ಥೆ ಮಾಡುವಂತೆ ಬಂದರು ಇಲಾಖೆಯನ್ನು ಮನವಿ ಮಾಡಿತು. ಹಡಗು ಬಂದರು ಸಮೀಪದಲ್ಲಿರುವದನ್ನು ವೀಕ್ಷಿಸಿದ ಅಧಿಕಾರಿಗಳು, ವಿದೇಶಿ ಹಡಗಿನವರು ಭಾರತದ ರಾಷ್ಟ್ರದ್ವಜವನ್ನು ತಲೆಕೆಳಗಾಗಿ ಹಾರಿಸಿರುವ ಬಗ್ಗೆ ಸಿಡಿಮಿಡಿಗೊಂಡರು. ಕೂಡಲೇ ಅದನ್ನು ಸರಿ ಪಡಿಸುವಂತೆ ಹಡಗಿನ ಕ್ಯಾಪ್ಟನ್ಗೆ ಸೂಚನೆ ನೀಡಿದರು. ಆರಂಭದಲ್ಲಿ ಹಡಗಿನಲ್ಲಿದ್ದ ಕಾಂಡ್ಲಾ ದೇಶದ ಉದ್ಯೋಗಿಗಳಿಗೆ ತಾವು ಮಾಡಿದ ತಪ್ಪಿನ ಅರಿವಾಗಿರಲಿಲ್ಲ. ರಾಷ್ಟ್ರದ್ವಜದ ಮಹತ್ವದ ಬಗ್ಗೆ ಅಧಿಕಾರಿಗಳು ಪರದೇಶ ಹಡಗು ಉದ್ಯೋಗಿಗಳಿಗೆ ತಿಳುವಳಿಕೆ ನೀಡಿದರು. ಕೂಡಲೇ ರಾಷ್ಟ್ರದ್ವಜವನ್ನು ಸರಿಯಾಗಿ ಹಾರಿಸಲಾಯಿತು. ತಮ್ಮ ತಪ್ಪಿನ ಅರಿವಾದ ಹಡಗಿನ ಸಿಬ್ಬಂದಿ ಕ್ಷಮೆ ಕೋರಿದರು. ಆ ನಂತರವೇ ಹಡಗನ್ನು ಟಗ್ ಮೂಲಕ ಎಳೆದು ವಾಣಿಜ್ಯ ಬಂದರಿಗೆ ತರಲಾಯಿತು
Leave a Comment