ಹೊನ್ನಾವರ;
ಹಾಲು ತರಲು ಮನೆಗೆ ಬಂದ ಯುವತಿಯ ಮೇಲೆ ಬಲತ್ಕಾರವೆಸಗಿದ ಪ್ರಕರಣ ಹೊನ್ನಾವರ ತಾಲೂಕಿನ ಕವಲಕ್ಕಿಯ ಪ್ಲಾಟ್ಕೇರಿಯಲ್ಲಿ ನಡೆದಿದ್ದು ಈ ಕುರಿತು ಪೋಲಿಸರಿಗೆ ಬಲತ್ಕಾರಕ್ಕೊಳಗಾದ ಯುವತಿಯ ತಾಯಿ ದೂರು ನೀಡಿದ್ದಾರೆ.
ಕವಲಕ್ಕಿ ಪ್ಲಾಟ್ಕೇರಿಯ ಸುಬ್ರಹ್ಮಣ್ಯ(ಸುಬ್ಬಾ) ಶೆಟ್ಟಿ(29) ಈ ಪ್ರಕರಣದ ಆರೋಪಿಯಾಗಿದ್ದಾನೆ. ಪ್ಲಾಟ್ಕೇರಿಯ ನಿವಾಸಿಯಾದ ಯುವತಿಯ ತಾಯಿ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. 21 ವರ್ಷದ ಮಗಳು ಸಂಜೆ ವೇಳೆ ಆರೋಪಿತನ ಮನೆಯಿಂದ ಹಾಲು ತರಲು ಹೋದ ವೇಳೆ ಆರೋಪಿಯು ತನ್ನ ಮಗಳನ್ನು ಬಲಾತ್ಕಾರವಾಗಿ ಲೈಂಗಿಕ ಸಂಭೋಗ ಮಾಡಿರುವುದಾಗಿ ಆರೋಪಿಸಿ ಯುವತಿಯ ತಾಯಿ ದೂರಿನಲ್ಲಿ ಆಪಾದಿಸಿದ್ದು, ಈ ಕುರಿತು ಪಿಎಸ್ಐ ಆನಂದಮೂರ್ತಿ ಪ್ರಕರಣ ದಾಖಲಿಸಿಕೋಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Leave a Comment