• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಸ್ತೆ ಅಪಘಾತದಲ್ಲಿ ಮೃತಪಟ್ಟ ಕರಡಿ

June 15, 2017 by Sachin Hegde Leave a Comment

ಕಾರವಾರ:

ವಾಹನದಡಿಗೆ ಸಿಲುಕಿ ಸಾವನಪ್ಪುವ ವನ್ಯಮೃಗಗಳ ಸಂಖ್ಯೆ ಹೆಚ್ಚಿದೆ. ದಟ್ಟ ಅರಣ್ಯವನ್ನು ಹೊಂದಿದ ಜೊಯಿಡಾ ಹಾಗೂ ದಾಂಡೇಲಿ ಪ್ರದೇಶದಲ್ಲಿ ಪದೇ ಪದೇ ಕಾಡುಪ್ರಾಣಿಗಳ ಸಾವು ಸಂಭವಿಸುತ್ತಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ಕೂಡ ವನ ಹಾಗೂ ವನ್ಯಜೀವಿಗಳು ವಿನಾಶದ ಹಾದಿಯಲ್ಲಿವೆ.
ವಾಹನಗಳ ಅಬ್ಬರಕ್ಕೆ ಕಾಡುಪ್ರಾಣಿಗಳು ನಲುಗಿವೆ. ಚಿರತೆ, ಕಾಡು ಹಂದಿ, ನಾಗರಹಾವು, ಮಂಡೂಕ, ಕರಡಿ, ಶಿಂಗಳಿಕ, ಮುಳ್ಳು ಹಂದಿ, ಜಿಂಕೆ ಹಾಗೂ ಕಡವೆಯಂತಹ ಜೀವಿಗಳು ವಾಹನಗಳ ಅಡಿ ಜೀವ ಬಿಡುತ್ತಿದೆ. ಮಂಗಳವಾರ ಕೂಡ ಜೊಯಿಡಾದಲ್ಲಿ ಕರಡಿಯೊಂದು ವಾಹನ ಅಪಘಾತದಲ್ಲಿ ಕೊನೆ ಉಸಿರೆಳೆದಿದೆ. ಜೊಯಿಡಾ ಹಾಗೂ ದಾಂಡೇಲಿ ಭಾಗದಲ್ಲಿ ವಾಹನ ಅಪಘಾತದಲ್ಲಿ ವನ್ಯಜೀವಿ ಮೃತಪಟ್ಟರೆ ವಾಹನ ಮಾಲಿಕರಿಗೆ 7 ವರ್ಷಗಳ ಕಾಲ ಶಿಕ್ಷೆ ವಿಧಿಸುವ ಬಗ್ಗೆ ರಸ್ತೆಯುದ್ದಕ್ಕೂ ನಾಮಫಲಕ ಹಾಕಲಾಗಿದೆ. ಈ ಬಗ್ಗೆ ತಿಳುವಳಿಕೆಯಿದ್ದರೂ ವಾಹನ ಚಾಲಕರ ಅಜಾಗರುಕತೆಯಿಂದಾಗಿ ಕಾಡುಪ್ರಾಣಿಗಳು ಉಸಿರು ಕಳೆದುಕೊಳ್ಳುತ್ತಿವೆ.
ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ರಾತ್ರಿ ಹಾಗೂ ನಸುಕಿನ ವೇಳೆ ವಾಹನ ಅಪಘಾತಗಳಲ್ಲಿ ಪ್ರಾಣಿ ಸಾವನಪ್ಪುವದು ಸಾಮಾನ್ಯವಾಗಿ ಕಂಡು ಬರುತ್ತದೆ. ಹೀಗಾಗಿ ಜೊಯಿಡಾದ ಕೆಲ ರಸ್ತೆಗಳನ್ನು ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ಬಂದ್ ಮಾಡಲಾಗುತ್ತದೆ. ಸ್ಥಳೀಯ ಜನರನ್ನು ಹೊರತು ಪಡಿಸಿ ಉಳಿದವರಿಗೆ ಪ್ರವೇಶ ನೀಡಲಾಗುವದಿಲ್ಲ. ಆದರೂ ನಿಯಮ ಉಲ್ಲಂಗಿಸಿ ಸಂಚಾರ ನಡೆಸುವದು ವನ್ಯಜೀವಿ ಸಾವಿಗೆ ಪ್ರಮುಖ ಕಾರಣವಾಗಿದೆ. ಅವಷ್ಯವಿದ್ದಲ್ಲಿ ರಾತ್ರಿ ಶಿಬಿರಗಳನ್ನು ನಡೆಸಿ ವನ್ಯಜೀವಿಗಳ ಚಲನ ವಲನಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಅಲ್ಲಲ್ಲಿ ಗುಪ್ತ ಕ್ಯಾಮರಾ ಅಳವಡಿಸಿ ಕಳ್ಳಭೇಟೆಗಾರರನ್ನು ಬಂಧಿಸಲಾಗಿದೆ. ಆದರೆ, ವಾಹನಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪುವ ಪ್ರಾಣಿಗಳ ಸಮಸ್ಯೆ ನಿವಾರಿಸಲು ಸಾದ್ಯವಾಗಿಲ್ಲ. ಅಂಕೆ ಸಂಖ್ಯೆಗಳನ್ನು ಕೆದಕಿದರೆ ಎರಡು ವರ್ಷದ ಅವದಿಯಲ್ಲಿ ಹತ್ತಕ್ಕೂ ಅಧಿಕ ವನ್ಯಜೀವಿ ಸಾವು ಇಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಾಣಿಗಳ ಸಂಖ್ಯೆಯೇ ಹೆಚ್ಚಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಪಘಾತ, ಕಡವೆ, ಕರಡಿ, ಕಳ್ಳಭೇಟೆ, ಕಾಡು ಹಂದಿ, ಕಾಡುಪ್ರಾಣಿ, ಕ್ಯಾಮರಾ, ಗುಪ್ತ, ಚಿರತೆ, ಜಿಂಕೆ, ಜೊಯಿಡಾ, ದಟ್ಟ ಅರಣ್ಯ, ದಾಂಡೇಲಿ, ನಾಗರಹಾವು, ನಾಮಫಲಕ, ಮಂಡೂಕ, ಮುಳ್ಳು ಹಂದಿ, ಮೃತಪಟ್ಟ, ರಸ್ತೆ, ವನ್ಯಮೃಗ, ವಾಹನ, ಶಿಂಗಳಿಕ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,058 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar