ದಾಂಡೇಲಿ;
ರಾಜ್ಯದ ಪ್ರಭಾವಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಪ್ರವಾಸೋಧ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡುವುದರ ಮೂಲಕ ಪ್ರವಾಸೋದ್ಯಮದ ಪುರೋ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆಂದು ಡಿ.ಟಿ.ಎ (ದಾಂಡೇಲಿ ಪ್ರವಾಸೋದ್ಯಮಿಗಳ ಸಂಘ) ಹೇಳಿದೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ನಿರ್ಗಮಿತ ಅಧ್ಯಕ್ಷ ಅನಿಲ್ ದಂಡಗಲ್ ಮತ್ತು ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ ಅವರುಗಳು ನಗರದ ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಡಿಟಿಎ ಅವಿರತ ಶ್ರಮಿಸುತ್ತಿದೆ. ಸಂಘದ ಅಪೇಕ್ಷೆ ಮತ್ತು ಬೇಡಿಕೆಯಂತೆ ಸಚಿವ ದೇಶಪಾಂಡೆಯವವರು ಮೌಳಂಗಿ ಇಕೋ ಪಾರ್ಕ್, ದಂಡಕಾರಣ್ಯ ಇಕೋ ಪಾರ್ಕನ್ನು ನಿರ್ಮಿಸಿ ನಗರದ ಪ್ರವಾಸೋಧ್ಯಮದ ಪ್ರಗತಿಗೆ ಐತಿಹಾಸಿಕ ಮುನ್ನಡಿ ಬರೆದಿದ್ದಾರೆ. ಪ್ರಸ್ತಾವಿತ ಮೊಸಳೆ ಪಾರ್ಕ್ ನಿರ್ಮಾಣಕ್ಕೂ ದೇಶಪಾಂಡೆಯವರು ವಿಶೇಷ ಮುತುವರ್ಜಿ ವಹಿಸಿದ ಫಲವಾಗಿ ಮೋಸಳೆ ಪಾರ್ಕ್ ಸಹ ಅತೀ ಶೀಘ್ರದಲ್ಲಿ ತಲೆಯತ್ತಲಿದೆ ಎಂದ ಅವರುಗಳು ಸಂಘದ ಆಶಯದಂತೆ ಪ್ರವಾಸೋಧ್ಯಮ ಶರವೇಗದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಅಂತೆಯೆ ಸಂಘವು ಪ್ರಗತಿಯತ್ತ ಹೆಜ್ಜೆಯಿಟ್ಟಿದ್ದು, ಸಂಘ ಹಾಗೂ ಪ್ರವಾಸೋಧ್ಯಮ ಕ್ಷೇತ್ರದ ಪ್ರಗತಿಗೆ ಕಾರಣೀಕರ್ತರಾದ ಸಚಿವ ದೇಶಪಾಂಡೆಯವರಿಗೆ ಹಾಗೂ ಸಂಘದ ಬೆಳವಣಿಗೆಗೆ ಕಾರಣರಾದ ಸಂಘದ ಸರ್ವ ಸದಸ್ಯರುಗಳು, ಇಲಾಖೆಯ ಅಧಿಕಾರಿಗಳ ಸಹಕಾರ ಮತ್ತು ನಗರದ ಜನತೆಯ ಮತ್ತು ಪ್ರವಾಸಿಗರ ಸಹಕಾರ ಸ್ಮರಣೀಯ ಎಂದರು.
ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ನೂತನ ಅಧ್ಯಕ್ಷ ಮಿಲಿಂದ ಕೊಡ್ಕಣಿ ಮತ್ತು ನೂತನ ಪ್ರಧಾನ ಕಾರ್ಯದರ್ಶಿ ಮೋಹನ ಹಲವಾಯಿಯವರು ಮಾತನಾಡಿ ಸಂಘದ ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಪ್ರವಾಸೋಧ್ಯಮವನ್ನು ಇನ್ನಷ್ಟು ಸದೃಢಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪ್ರವಾಸೋಧ್ಯಮದ ಪ್ರಗತಿಗೆ ಐತಿಹಾಸಿಕ ಕೊಡುಗೆಯನ್ನು ನೀಡಿದ ಸಚಿವ ದೇಶಪಾಂಡೆಯವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಪ್ರವಾಸೋಧ್ಯಮ ಕ್ಷೇತ್ರದ ಪ್ರಗತಿಗೆ ಶ್ರಮಿಸುವುದೆಂದರಲ್ಲದೇ, ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತೆ ವಿಶೇಷ ಯೋಜನಾ ವರದಿಯನ್ನು ಸಿದ್ದಪಡಿಸಿ ಸಚಿವರ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರುಗು ತರುವುದೆಂದರು. ನಿರೀಕ್ಷಗೆಗೂ ಮೀರಿ ಸಚಿವ ದೇಶಪಾಂಡೆಯವರು ಪ್ರವಾಸೋದ್ಯಮಕ್ಕೆ ಭದ್ರ ಬುನಾದಿ ಹಾಕುವುದರ ಮೂಲಕ ನಗರ ಹಾಗೂ ನಗರದ ಸುತ್ತಮುತ್ತಲ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದಾರೆಂದರು.
ಈ ಸಂದರ್ಭದಲ್ಲಿ ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷರುಗಳಾದ ಮಂಜು ರಾಥೋಡ, ರಾಜು ಸರ್ವರ್, ಖಜಾಂಚಿ ಮುರಳಿಧರ್ ನಾಯ್ಕ, ಸಹ ಕಾರ್ಯದರ್ಶಿ ಪರೀದ್, ಸದಸ್ಯರುಗಳಾದ ಗಣೇಶ ಕಾಮತ್, ನವೀನ ಕಾಮತ್, ಇಮಾಮ್ ಸರ್ವರ್, ಶ್ರೀರಾಂ ಪೈ, ಸುರೇಶ ನೂಲ್ವಿ, ಪ್ರಶಾಂತ ಬಸೂರ್ತೆಕರ, ಅಂಜನಿ ಕುಮಾರ್, ಅಶೋಕ ಬಿಡ್ಡ, ಪ್ರತಾಪ್ ಸಿಂಗ್ ರಜಾಪೂತ್, ಶ್ಯಾಮಲ್ ಮೊದಲಾದವರು ಉಪಸ್ಥಿತರಿದ್ದರು.
Leave a Comment