ಹೊನ್ನಾವರ :
ವಿಶ್ವ ಸಂಸ್ಥೆ, ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ದಿನವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಹೊನ್ನಾವರದ ಎಸ್. ಡಿ. ಎಂ. ಮಹಾವಿದ್ಯಾಲಯ, ಎನ್ಸಿಸಿ ನೌಕಾ ಹಾಗೂ ಭೂ ಸೇನಾ ಘಟಕಗಳ ವತಿಯಿಂದ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್ ಎಸ್ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಯೋಗದ ಮಹತ್ವವನ್ನು ತಿಳಿಸಿದರಲ್ಲದೇ ಯೋಗ ಪ್ರಾತ್ಯಕ್ಷಿಕೆಯಲ್ಲಿಯೂ ಪಾಲ್ಗೊಂಡರು. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಮ್ ಎಚ್ ಭಟ್ಟ ಇವರು ಉಪಸ್ಥಿತರಿದ್ದರು.
ಕಾಲೇಜಿನ ಎನ್ಸಿಸಿ ಅಧಿಕಾರಿ ಲೆ| ಎನ್ ಜಿ ಅನಂತಮೂರ್ತಿ ಹಾಗೂ ಸಬ್ ಲೆ| ಸಂತೋಷ ವಿ ಗುಡಿಗಾರ ಇವರು ಕಾರ್ಯಕ್ರಮ ಸಂಯೋಜಿಸಿದ್ದರು.
ಯೋಗ ಗುರು ಪ್ರಭಾಕರ ಗೌಡ ಇವರು ಯೋಗ ತರಬೇತಿ ನೀಡಿದರು. ಸುಮಾರು 200 ವಿದ್ಯಾರ್ಥಿಗಳು, ಎನ್ಸಿಸಿ ಕ್ಯಾಡೆಟ್ಗಳು ಭಾಗವಹಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ಸಿಗೆ ಕಾರಣರಾದರು.
Leave a Comment