• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ

June 26, 2017 by Sachin Hegde Leave a Comment

ದಾಂಡೇಲಿ :

ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಲ್ಲಿ ಸಿಗುವ ತೃಪ್ತಿ ಇನ್ನಾವುದರಲ್ಲಿ ಕೂಡ ಸಿಗುವುದಿಲ್ಲಾ. ಸೇವೆಯೆ ಮೂಲ ಮಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಈ ವರ್ಷ ತನ್ನ ಸ್ಥಾಪನೆಯ ನೂರನೆ ವರ್ಷ ಆಚರಣೆ ಆಚರಿಸುತ್ತಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಸ್ಥೆಯಿಂದ ಸಿಗುವದು ನಿಶ್ಚಿತ ಎಂದು ಎಂ.ಜೆ.ಎಫ. ಲಯನ್ಸ್ ಡಿ-317-ಬಿನ ಪ್ರಥಮ ಜಿಲ್ಲಾ ಪ್ರಾಂತಪಾಲೆ ಮೊನಿಕಾ ಸಾವಂತ ನುಡಿದರು.
ಅವರು ನಗರದ ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಂಗಣದಲ್ಲಿ ಶನಿವಾರ ಸಂಜೆ ಏರ್ಪಡಿಸಲಾದ ಸ್ಥಳೀಯ ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬಿನ 2017-2018ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಿಗೆ ಪದಗ್ರಣದ ಬೊಧÀನೆ ನೆರವೆರಿಸಿ ಮಾತನಾಡುತ್ತಾ ಸ್ಥಳೀಯ ಅಂಬಿಕಾನಗರ-ದಾಂಡೇಲಿ ಲಾಯನ್ಸ್ ಕ್ಲಬನ ಕಾರ್ಯ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ತನ್ನ ನೂರನೆ ವರ್ಷದ ಆಚರಣೆಯ ಸಂದರ್ಭದಲ್ಲಿ ಶಾಶ್ವತ ಯೋಜನೆಗಳಿಗಾಗಿ ಹಲವು ರಾಷ್ರಮಟ್ಟದ ಸಂಘ ಸಂಸ್ಥೆಗಳೊಂದಿಗೆ ಹಣಕಾಸಿನ ಸಹಾಯ ನೀಡುವ ಒಡಂಬಡೀಕೆ ಮಾಡಿ ಕೊಂಡಿದೆ ಇದರ ಲಾಭ ಪಡೆದು ಬದಜನರ ಉದ್ಧಾರಕ್ಕೆ ಲಯನ್ಸ್ ಸದಸ್ಯರು ಮುಂದೆ ಬರಬೇಕು ಎಂದು ಅವರು ನುಡಿದರು.
ಮುಖ್ಯ ಅತಿಥಿಯಾಗಿ ಹಳಿಯಾಳದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ ಮಾತನಾಡಿ ಇಂದು ನಿಸರ್ಗದಲ್ಲಿ ನಾವು ಬದುಕಲು ಪಡೆಯುವ ನೀರು, ಗಾಳಿಯ ಸದು ಉಪಯೋಗ ಅವುಳ ಸಂರಕ್ಷಣೆಗೆ ಹೆಚ್ಚಿನ ಅರಿವನ್ನು ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ನೀಡಬೇಕಾಗಿದೆ ಎಂದರು.
ಗೌರವ ಅತಿಥಿಗಳಾಗಿ ಮಾತನಾಡಿದ ನಗರಸಭೆಯ ಅಧ್ಯಕ್ಷ ನಾಗೇೀಶ ಸಾಳುಂಕೆ ಹಾಗು ಸ್ಥಳೀಯ ವೆಸ್ಟ್‍ಕೋಸ್ಟ್ ಪೇಪರ್ ಮಿಲ್ಲಿನ ಹಿರಿಯ ಸಂರ್ಪಕ ಅಧಿಕಾರಿ ಕೆ.ಜಿ. ಗಿರಿರಾಜ ಮಾತನಾಡಿ ಸ್ಥಳಿಯ ಲಯನ್ಸ್ ಕ್ಲಬಿನÀ ಎಲ್ಲ ಕೆಲಸ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ನೀಡಿದರು.
ನಗರಸಭೆಯ ಸದಸ್ಯ ಮಾಜಿ ಉಪಾಧ್ಯಕ್ಷ ಅನಿಲ ದಂಡಗಲ್, ಸ್ಥಳೀಯ ಲಯನ್ಸ್ ಕ್ಲಬಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅಂತರಾಷ್ಟೀೀಯ ಲಯನ್ಸ್ ಕ್ಲಬಿನ ನೂರನೆ ವರ್ಷಾಚರಣೆಯ ಸಂದರ್ಭದಲ್ಲಿ ಆಂಬಿಕಾನಗರ- ದಾಂಡೇಲಿ ಕ್ಲಬಿನ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವದಕ್ಕೆ ಸಂತೋಷ ವ್ಯಕ್ತ ಪಡಿಸಿದರು.
ಎನ್.ವಿ ಪಾಟೀಲ್ ಕಾರ್ಯದರ್ಶಿಯಾಗಿ, ಪ್ರಸಾದ ಶಿರಟ್ಟಿ ಖಜಾಂಚಿಯಾಗಿ ಹಾಗು ಇತರ ಪದಾಧಿಕಾರಿಗಳು ಈ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು.
ಸ್ಥಳೀಯ ವ್ಯಾಪರಸ್ಥರಾದ ಗಣೇಶ ಖಾನಾಪುರ, ನರೇಂದ್ರ ಚವ್ಹಾಣ, ಕೆಸಲ್‍ರಾಕ್‍ನ ಆರ್.ಎಫ್.ಓ ನಾಗರಾಜ, ಕ್ಲಬಿನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಕಟಪೂರ್ವ ಕ್ಲಬಿನ ಅಧ್ಯಕ್ಷ ವಿ.ಆರ್. ಹೆಗಡೆ, ನಿಕಟಪೂರ್ವ ಕಾರ್ಯದರ್ಶಿ ವಿರೇಶ, ಕಾರ್ಯದರ್ಶಿ ಎನ್.ವಿ. ಪಾಟೀಲ, ಲಯನ್ಸ್ ಜಿಲ್ಲಾ ಕಾರ್ಯಕಾರಿ ಮಂಡಳಿಯ ಸದಸ್ಯ ಯು.ಎಸ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಂತರಾಷ್ಟ್ರಿಯ, ಅಂಬಿಕಾನಗರ, ಕಾರ್ಖಾನೆ, ಕಾರ್ಯಗಳ, ಕ್ಲಬ್, ಡಿ-317-ಬಿನ, ಡಿಲಕ್ಸ್, ದಾಂಡೇಲಿ, ಪ್ರಥಮ, ಬಗ್ಗೆ, ಲಯನ್ಸ್, ಶ್ಲಾಘನೆ, ಸಂಕಷ್ಟ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar