ಹೊನ್ನಾವರ :
ಗುಡ್ಡ ಕುಸಿತದಿಂದಾಗಿ 6ಮನೆಗಳು ಅಪಾಯಕ್ಕೆ ಸಿಲುಕಿವೆ. ಕಾನೂನು ಉಲ್ಲಂಘಿಸಿ ಗುಡ್ಡ ಕಡಿದ ಭೂಮಾಲಕರು ಶಾಸಕಿ, ದಂಡಾಧಿಕಾರಿಗಳು ಮತ್ತು ಮನೆ ಮಾಡಿಕೊಂಡಿದ್ದವರ ಎದುರು ತಡಗೋಡೆ ನಿರ್ಮಿಸಲು ಒಪ್ಪಿಕೊಂಡ ಘಟನೆ ಇಂದು ನಡೆಯಿತು.
ರಾಷ್ಷ್ರೀಯ ಹೆದ್ದಾರಿಗೆ ಹೊಂದಿಕೊಂಡು ಕರ್ನಲ್ ಬಳಿ 18 ಗುಂಟೆ ಖಾಸಗಿ ಗುಡ್ಡವನ್ನು ಬಾರ್ ಮಾಲಕ ಸಂತೋಲಿನ್ ಫರ್ನಾಂಡೀಸ್ ಎಂಬವರು ಖರೀದಿಸಿದ್ದರು. ಗುಡ್ಡವನ್ನು ಕಡಿದು, ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಇಳಿಸುವ ಕೆಲಸ ನಡೆದಾಗ ಗುಡ್ಡದ ಮೇಲೆ ಮನೆ ಕಟ್ಟಿಕೊಂಡ ಸಾರ್ವಜನಿಕರು ವಿರೋಧಿಸಿದರು. ಪ.ಪಂ. ಗುಡ್ಡ P್ಪಡಿಯಲು ಪರವಾನಗಿ ಕೊಟ್ಟು ಜನರ ತಕರಾರು ಬಂದ ಕಾರಣ ಪರವಾನಗಿ ಹಿಂತೆಗೆದುಕೊಂಡಿತ್ತು. ಪತ್ರಿಕೆಗಳಲ್ಲಿ ಹಲವು ಬಾರಿ ಅಪಾಯದ ಮುನ್ಸೂಚನೆ ನೀಡಲಾಗಿತ್ತು. ದೂರು ಜಿಲ್ಲಾಧಿಕಾರಿಯ ತನಕ ಹೋಗಿತ್ತು. ಮೆಟ್ಟಿಲು ಮೆಟ್ಟಿಲಾಗಿ ಗುಡ್ಡ ಕತ್ತರಿಸಬೇಕು. 15 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿಕೊಡಬೇಕು. ರಾಷ್ಟ್ರೀಯ ಹೆದ್ದಾರಿಗೆ ಮತ್ತು ಮೇಲಿನ ಭಾಗದ ಜನರಿಗೆ ತೊಂದರೆಯಾಗಬಾರದು ಎಂದು ಡಿಸಿ ಕಛೇರಿಯಲ್ಲಿ ಒಪ್ಪಿಕೊಂಡ ಭೂ ಮಾಲಕರು ಅಫಡವೇಟ್ ಮಾಡಿಕೊಟ್ಟಿದ್ದರು.
ಅಪಾಯದಲ್ಲಿ 6 ಮನೆ ಆದರೆ ಹಿಂದೆ ಮಾಡಿಕೊಂಡ ಒಪ್ಪಂದದಂತೆ ನಡೆಯದೆ ನೇರವಾಗಿ ಗುಡ್ಡ ಕತ್ತರಿಸಿ ಹಾಗೆಯೇ ಬಿಟ್ಟಿದ್ದರು. ಮಳೆಗೆ ಗುಡ್ಡ ಕುಸಿದು ಹೆದ್ದಾರಿ ಪಕ್ಕದಲ್ಲಿ ಬಿದ್ದಿವೆ. ಗುಡ್ಡದ ಮೇಲಿನ ಮನೆಗಳ ಅಡಿಪಾಯ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಎಸ್.ಐ ಆನಂದಮೂರ್ತಿ, ತಹಸೀಲ್ದಾರ್ ವಸಂತ ಗೌಡ ಭೂಮಾಲP್ಪರಿಗೆ ನೋಟಿಸು ನೀಡಿದ್ದಾರೆ.
ಒಪ್ಪಂದದ ಪ್ರಕಾರ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿಕೊಡಬೇಕು ಅಲ್ಲಿಯವರೆಗೆ ಅಪಾಯದಲ್ಲಿರುವ ಮನೆಚಿiÀುವರಿಗೆ ಬೇರೆ ಮನೆ ಮಾಡಿಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮೊಕದ್ದಮೆ ಹೂಡಲಾಗುವುದು ಎಚಿದು ಅಧಿಕಾರಿಗಳು ಎಚ್ಚರಿಸಿದ್ದಾರೆ.
————————————————————————————————-
ಕ.ರಾ.ವೆ . ಖಂಡನೆ
Éಪಟ್ಟಣದ ಕರ್ನಲ್ ಕಂಬದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಡ್ಡವನ್ನು ಅಗೆಯುವುದನ್ನು ತಡೆಗಟ್ಟುವ ಬಗ್ಗೆ 2012 ರಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜಂಟಿ ವಿಚಾರಣೆಯನ್ನು ಮಾಡಿ ಜಾಗದ ಮಾಲೀಕರನ್ನು ಕರೆಸಿ ಖಡ್ಡಾಯವಾಗಿ ಗುಡ್ಡ ಕುಸಿಯದ ಹಾಗೆ ವೈಜಾನಿಕವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಯಾವುದೇ ಹಾನಿ ಆಗದಂತೆ ಕ್ರಮಕೈಗಳ್ಳಲು ನಿಬಂಧನೆ ವಿಧಿಸಿದ್ದಾರೆ. ಆದರೆ ಆ ಜಾಗದ ಮಾಲೀಕರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ನಿಬಂಧನೆಗಳನ್ನು ಮೀರಿ ಪುನಃ ಗುಡ್ಡವನ್ನು ಅಗೆಯುತ್ತಿರುವಾಗ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದವರು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನೇ ಇದ್ದಾರೆ. ಈಗ ಮತ್ತೆ ಗುಡ್ಡ ಕುಸಿದಾಗ ಶಾಸಕಿಯರು, ತಾಲೂಕು ದಂಡಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ ಅಧಿಕಾರಿಗಳು ಮತ್ತು ಅಧ್ಯಕ್ಷರು ಬಂದು ಅಲ್ಲಿಯ ಸ್ಥಳವನ್ನು ಪರಿಶೀಲಿಸಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆ ಸ್ಥಳದಲ್ಲಿ ಏನಾದರೂ ಹಾನಿಯಾಗಿದ್ದಲ್ಲಿ ಅಥವಾ ಯಾವುದೇ ಅನಾಹುತ ಆದಲ್ಲಿ 2012 ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾಡಳಿತ ಕಛೇರಿಯ ಹಾಗೂ ತಾಲೂಕಾ ದಂಡಾಧಿಕಾರಿಗಳ ಕಛೇರಿಯ ಸಿಬ್ಬಂದಿಗಳಿಂದಲೇ ಆದ ನಷ್ಟವನ್ನು ಭರಿಸಿಕೊಳ್ಳಬೇಕು. ಮತ್ತು ಅಂಥಹ ಅಧಿಕಾರಿಗಳನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ,ಹೊನ್ನಾವರ ತಾಲೂಕಾ ಘಟಕದ ಅಧ್ಯಕ್ಷರಾದ ಉದಯರಾಜ್ ಮೇಸ್ತ ಹಾಗೂ ssಸುಧಾಕರ ಹೊನ್ನಾವರ ಉಗ್ರವಾಗಿ ಖಂಡಿಸಿದ್ದಾರೆ.
Leave a Comment