ಹೊನ್ನಾವರ:
ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲಾದ ಘಟನೆ ಅಪ್ಸರಕೊಂಡದಲ್ಲಿ ಸೋಮವಾರ ಸಂಜೆ ನಡೆದಿದೆ.ಕೊಪ್ಪಳದ ಕಾರಟಿಯ ಜಯಂತ ಜೋಶಿ (22) ಹಾಗೂ ಬೆಂಗಳೂರು ಸಕಲೇಶಪುರ ಮೂಲದ ನೀಲೇಶ ವಿರಯ್ಯ (23)ಸಮುದ್ರ ಪಾಲಾದವರು.ಗೆಳೆಯನ ವಿವಾಹಕ್ಕಾಗಿ ಇಡಗುಂಜಿಗೆ ಆಗಮಿಸಿದ್ದ ಅಪ್ಸರಕೊಂಡದಲ್ಲಿ 16 ಜನ ಸಮುದ್ರಕ್ಕೆ ಇಳಿದಿದ್ದರು. ಇವರಲ್ಲಿ ತುಮಕುರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ ಜೋಶಿ ಹಾಗೂ ನೀಲೇಶ ವಿರಯ್ಯ ಸಮುದ್ರ ಪಾಲಾದರು. ನೀರು ಪಾಲಾದ ಮೂವರಲ್ಲಿ ಒಬ್ಬರು ಈಜಿ ದಡ ಸೇರಿ ಬಜಾವಾಗಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment