ಹೊನ್ನಾವರ:
ಶ್ರೀ ಶಾರದಾಂಬಾ ಪದವಿ ಪೂರ್ವ ಉರ್ದು ಕಾಲೇಜು ಉಪ್ಪೋಣಿಗಾಗಿ ಮಧ್ಯ ಪ್ರಾಚ್ಯ ದೇಶದಲ್ಲಿ ಉದ್ಯಮಿ ಆಗಿರುವ ಕುದ್ರಿಗಿ ಗ್ರಾಮದ ಬಾವಾಫಕಿ ಹುಸೇನ್ ಮಸ್ತಾನ್ ಶಾಲಾ ವಾಹನವನ್ನು ದೇಣಿಗೆಯಾಗಿ ನೀಡಿದರು.
ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಸುಲೇಮಾನ್ ತಲಕಣಿ, ಮಾಜಿ ಜಿ,ಪಂ ಅಧ್ಯಕ್ಷ ಆರ್ ಎಸ್ ರಾಯ್ಕ, ಉಪ್ಪೋಣಿ ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ ರಾಯ್ಕರ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಮಾಜಿ ಜಿ.ಪಂ ಸದಸ್ಯ ಪಿ.ಎಸ್ ಭಟ್ಟ ಉಪ್ಪೋಣಿ, ಗೌಸಿಯಾ ಕಮಿಟಿ ಅಧ್ಯಕ್ಷ ಫೈಸಲ್ ಮಸ್ತಾನ್, ಮಾಗೋಡ ಪಂಚಾಯತ ಸದಸ್ಯ ಬಾಷಾ ಸನ್ನೆಬೈಲ್ ಇನ್ನಿತರರು ಉಪಸ್ಥಿತರಿದ್ದರು.
Leave a Comment