ಹೊನ್ನಾವರ :
ತಾಲೂಕಿನ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಶಿಕ್ಷಕಿಯರ ಮಕ್ಕಳು ಜಿಲ್ಲಾ ಪಂಚಾಯತ್ ಅಧಯಕ್ಷರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ತಮ್ಮ ತಂದೆ-ತಾಯಿಯರಿಗೆ ಸಕಾಲದಲ್ಲಿ ಸಂಬಳ ಆಗುತ್ತಿಲ್ಲ ಎಂದು ದೂರಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ವಿಪರೀತ ಆಗಿದ್ದು, ಎರಡು ಮೂರು ತಿಂಗಳು ಸಂಬಳವಾಗದೇ ಕುಟುಂಬದ ಸ್ಥಿತಿ ಪರದಾಡುವಂತಾಗುತ್ತದೆ ಎಂದು ದೂರಿದ್ದಾರೆ.”ಬಜೆಟ್ ಇಲ್ಲ ಅಥವಾ ಬಜೆಟ್ ಬಂದಿದೆ ಹಂಚಿಕೆ ಆಗಿಲ್ಲ” ಎಂಬ ಕ್ಷುಲಕ ಅರ್ಥವಿಲ್ಲದ ಕಾರಣ ನೀಡಿ ದುರುದ್ದೇಶದಿಂದ ದುಡಿಯುವ ಶಿಕ್ಷಕರನ್ನು ಅಪಮಾನಕ್ಕೀಡು ಮಾಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಿ ಪ್ರತಿ ತಿಂಗಳ 5 ನೇ ತಾರೀಖಿನೊಳಗೆ ಸಂಬಳ ಮಾಡುವಂತೆ ಒತ್ತಾಯಿಸಿದ್ದಾರೆ.
Leave a Comment