ಹೊನ್ನಾವರ:
ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಬಿಜೆಪಿ ವಿಸ್ತಾರಕರಾಗಿ ಪಟ್ಟಣದ ಪಕ್ಷದ ಪ್ರಮುಖ ಮುಖಂಡರ ಮನೆಮನೆಗೆ ಭೇಟಿ ನೀಡಿ ಪಕ್ಷದ ಪ್ರಚಾರ ನಡೆಸಿದರು.
ಮಾಜಿ ಸಚಿವ ಆರ್.ಎನ್.ನಾಯ್ಕ, ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಹಾಗೂ ಇತರ ಮುಖಂಡರ ಮನೆಗಳಿಗೆ ಭೇಟಿ ನೀಡಿ ಪಕ್ಷದ ಪರ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಹಿರಿಯ ಮುಖಂಡರಾದ ಉಮೇಶ ನಾಯ್ಕ, ಸೂರಜ್ ನಾಯ್ಕ ಸೋನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಮತ್ತು ರಾಜು ಭಂಡಾರಿ ಹಾಗೂ ತಾಲೂಕು ಮುಖಂಡರು ಪಾಲ್ಗೊಂಡಿದ್ದರು.
Leave a Comment