• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೊಂಕಣಿ ಖಾರ್ವಿ ಸಮಾಜದವರಿಂದ ಗುರುದರ್ಶನ ಕಾರ್ಯಕ್ರಮ

July 21, 2017 by Gaju Gokarna Leave a Comment

ಹೊನ್ನಾವರ;

ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ದಿವ್ಯ ಆರ್ಶೀವಾದಗಳಿಂದ ಆರಂಭವಾದ ಕೊಂಕಣಿಖಾರ್ವಿ ಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿ ಗುರುಭವನದಲ್ಲಿ ನಡೆಯಿತು.
ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಗುರುದರ್ಶನ ಪಡೆದರು.
ಗುರುವಂದನೆ ಸ್ವೀಕರಿಸಿ ಆಶಿರ್ವಚನ ನೀಡಿದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶೀಷ್ಯರ ಹಿತ ಬಯಸುವವರೆ ನಿಜವಾದ ಗುರುಗಳು. ಶಿಷ್ಯರು ಅಂತಹ ಗುರುಗಳ ಬಗ್ಗೆ ಅಪಾರವಾದ ಭಕ್ತಿ ಭಾª ವನ್ನು ತಳೆದು ಅವರನ್ನು ದೇವರಿಗೆ ಸಮಾನವಾಗಿ ಕಾಣುತ್ತಾರೆ. ಹೀಗೆ ಸನಾತನ ಧರ್ಮದಲ್ಲಿ ಗುರು ಶಿಷ್ಯ ಸಂಭಂದ ಆಭಿನಾಭಾವವಾದ್ದು ಎಂದು ಹೇಳಿದರು.
ಕೊಂಕಣ ಖಾರ್ವಿ ಸಮಾಜದವರು ತಮ್ಮ ಗುರುಪೀಠವಾದ ಶೃಂಗೇರಿ ಶಾರದಾ ಪೀಠವನ್ನು ತಲೆತಲಾತಂರಗಳಿಂದ ಪಾರಂಪರಿಕವಾಗಿ ನಂಬಿಕೊಂಡು ಬಂದವರು. ಈ ಸಂಬಂಧ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಧೃಢಗೊಂಡು ಸಮಾಜದ ಎಲ್ಲರೂ ಅಭಿವೃದ್ಧಿಗೊಂಡು ಶ್ರೇಯೋವಂತರಾಗಲೆಂದು ಆರ್ಶೀವದಿಸಿದರು.
ಕುಂದಾಪುರದ ತ್ರಾಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಂಕಣ ಖಾರ್ವಿ ಸಮಾಜದ ಸಭಾಭವನ ಅಂತರಾಷ್ಟ್ರೀಯ ಮೀನುಗಾರರ ದಿನಾಚರಣೆಯಾದ ನವೆಂಬರ್ 21 ರಂದು ಉದ್ಘಾಟನೆಗೊಳ್ಳಲಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಲಿ ಎಂದು ಅವರು ಆರ್ಶೀವದಿಸಿದರು.
ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ. ಹೆಚ್. ವಿ. ನರಸಿಂಹ ಮೂರ್ತಿಯವರು ಮಾತನಾಡಿ, ನವರಾತ್ರಿ ದಿನಗಳಲ್ಲಿ ಜಗನ್ಮಾತೆ ಶಾರದಾಂಬೆ ದರ್ಶನ ಮಾಡಿದರೆ ಲಭಿಸುವಷ್ಟೆ ಪುಣ್ಯ ಚಾರ್ತಮಾಸ್ಯ ವೃತ ನಿರತರಾದ ಜಗದ್ಗುರುಗಳ ದರ್ಶನದಿಂದ ಲಭಿಸುತ್ತದೆ. ಅಖಿಲ ಭಾರತ ಕೊಂಕಣ ಖಾರ್ವಿ ಸಮಾಜದವರು ಪ್ರತಿ ವರ್ಷವು ತಪ್ಪದೇ ಚಾತರ್ಮಾಸ್ಯ ಕಾಲದಲ್ಲಿ ಜಗದ್ಗುರುಗಳ ದರ್ಶನ ಪಡೆದು ಅಭಿವೃದ್ಧಿ ಹೊಂದುತ್ತಿರುವುದು ಇತರ ಶಿಷ್ಯ ಸಮಾಜಗಳಿಗೊಂದು ಆದರ್ಶ ಎಂದು ಹೇಳಿ ಜಗದ್ಗುರುಗಳಿಗೆ ಅಭಿವಂದನೆ ಸಲ್ಲಿಸಿದರು.
ಗುರುದರ್ಶನ ಸಮಿತಿಯ ಅಧ್ಯಕ್ಷ ವಸಂತ ಖಾರ್ವಿ ಮಾತನಾಡಿ, ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಗುರುದರ್ಶನ ಸಮಿತಿಯು ಕಳೆದ 18 ವರ್ಷಗಳಿಂದ ನಿರಂತರವಾಗಿ ಚಾತರ್ಮಾಸ್ಯ ಸಂದರ್ಭದಲ್ಲಿ ಗುರುದರ್ಶನ ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಂಗಳೂರು, ಗೋವಾ ಹಾಗೂ ಮುಂಬೈಯ ಕೊಂಕಣ ಖಾರ್ವಿ ಸಮಾಜದ ಪ್ರಮುಖರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡು ಗುರುದರ್ಶನ ಪಡೆದರು.
ಈ ಸಂಧರ್ಭದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷ ಕೆ. ಬಿ. ಖಾರ್ವಿ, ಹಿರಿಯ ಉಪಾಧ್ಯಕ್ಷ ಮೋಹನ ಬಾನಾವಳಿಕರ, ಉಪಾಧ್ಯಕ್ಷರುಗಳಾದ ತಿಮ್ಮಪ್ಪ ಖಾರ್ವಿ, ಸೂರ್ಯಕಾಂತ ಸಾರಂಗ, ಗುರುದರ್ಶನ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೇಸ್ತ, ಮುಖಂಡರಾದ ರವಿ ಟಿ. ನಾಯ್ಕ, ಜಯಾನಂದ ಖಾರ್ವಿ, ಎನ್. ಡಿ. ಖಾರ್ವಿ, ಶಿವರಾಜ್ ಮೇಸ್ತ, ಗಣಪತಿ ಬಾನಾವಳಿಕರ ಬೇಲೆಕೇರಿ, ಗುರುದಾಸ ಬಾನಾವಳಿಕರ್, ಅಣ್ಣಪ್ಪ ಸೋಮಯ್ಯ ಖಾರ್ವಿ ಮಂಕಿ ಮುಂತಾದವರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಉಡುಪಿ, ಉತ್ತರ ಕನ್ನಡ, ಕನ್ನಡ, ಕಾರ್ಯಕ್ರಮ, ಕುಂದಾಪುರದ, ಕೊಂಕಣ, ಕೊಂಕಣಿ, ಖಾರ್ವಿ, ಗುರುದರ್ಶನ, ಗೋವಾ, ಜಗದ್ಗುರು, ತ್ರಾಸಿ, ದಕ್ಷಿಣ, ಬೆಂಗಳೂರು, ಭಾರತಿತೀರ್ಥ, ಮಹಾಸ್ವಾಮಿ, ಮುಂಬೈಯ, ಶಿವಮೊಗ್ಗ, ಶೃಂಗೇರಿ, ಶ್ರೀ ಶ್ರೀ, ಸಮಾಜ, ಸಾಮೂಹಿಕ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar