ಹಳಿಯಾಳ;
ನದಿಗೆ ಈಜಲು ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಪಟ್ಟಣದ ಗಾಂಧಿಕೇರಿ ನಿವಾಸಿ ಗೌತಮ ಪರಶುರಾಮ್ ಕುರಿಯಾರ್ (20)ನ ಮೃತದೇಹ 22 ಗಂಟೆಗಳ ಬಳಿಕ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.
ಪಟ್ಟಣದಿಂದ 3 ಕೀಮಿ ಅಂತರದಲ್ಲಿರುವ ಕಳಸಾಪೂರ ಗ್ರಾಮದ ನದಿಯಲ್ಲಿ ಘಟನೆ ಸಂಭವಿಸಿತ್ತು ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಹಾಗೂ ಮುಳುಗು ತಜ್ಞರು ಸ್ಥಳೀಯ ಜನರ ಸಹಕಾರದೊಂದಿಗೆ ರಾತ್ರಿ ಈಡಿ ಕಾರ್ಯಾಚರಣೆ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ ಬಳಿಕ ಭಾನುವಾರ ಬೆಳಿಗ್ಗೆ ತೀವೃಗೊಂಡ ಶೋಧಕಾರ್ಯದಿಂದ ಮೃತದೇಹ ಪತ್ತೆಯಾಗಿದ್ದು ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತನ ಅಂತ್ಯಕ್ರಿಯೆ ನೆರವೆರಿತು. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment