ಹೊನ್ನಾವರ:
ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ನಾಗಾರಾಧನೆಗೆ ಪುಣ್ಯ ಸ್ಥಳವಾಗಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ನಾಗಮೂರ್ತಿಗೆ ಸಾವಿರಾರು ಭಕ್ತಾದಿಗಳಿಂದ ಅಭಿಷೇಕ ಸೇವೆಗಳು ವಿಜೃಂಭಣೆಯಿಂದ ನಡೆದವು.
ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ಮಂತ್ರಾಭಿಷೇಕ, ಹಣ್ಣು-ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ ಮುಂತಾದ ಸೇವೆ ಭಕ್ತರಿಂದ ನಡೆಯಿತು. ವಿವಿಧ ಭಾಗಗಳಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.
ದೇವಾಲಯದ ಸಮೀಪವಿರುವ ನಾಗಬನದಲ್ಲಿ ವಿಶೇಷವಾಗಿ ನಾಗಮೂರ್ತಿಗೆ ನಾಗಾರಾಧನೆ, ಫಲಾಭಿಷೇಕ, ಕ್ಷೀರಾಭಿಷೇಕ ಹಾಗೂ ವಿವಿಧ ಸೇವೆಗಳು ಭಕ್ತರಿಂದ ನಡೆಯಿತು. ವಿವಿಧ ಹರಕೆ ಹಾಗೂ ಭಕ್ತಿಪೂರ್ವಕವಾಗಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪುಣ್ಯ ಸ್ಥಳವಾದ `ನಾಗಬನ’ದಲ್ಲಿ ಸಾವಿರಾರು ಭಕ್ತರು ನಾಗಮೂರ್ತಿಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿದರು.
Leave a Comment