ಹೊನ್ನಾವರ :
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿಯವರ ಪತ್ನಿ ಸುಮಾ ಜಗದೀಪ ತೆಂಗೇರಿ(40) ಇವರು ಅನಾರೋಗ್ಯದಿಂದ ನಿದನ ಹೊಂದಿದರು. ಇವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತಳ ಅಂತಿಮ ದರ್ಶನಕ್ಕೆ ಶಾಸಕಿ ಶಾರದಾ ಶೆಟ್ಟಿ, ರವಿಕುಮಾರ ಎಮ್, ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಎಸ್ ಮೇಸ್ತ, ಪಿಎಲ್ಡಿ ಬ್ಯಾಕ್ ಅಧ್ಯಕ್ಷ ಯೋಗೇಶ ರಾಯ್ಕರ್, ಹೊನ್ನಾವರ ಅರ್ಬನ್ ಬ್ಯಾಂಕ ಅಧ್ಯಕ್ಷ ರಾಘವ ಬಾಳೇರಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ರವಿಕುಮಾರ ಶೆಟ್ಟಿ ಕವಲಕ್ಕಿ, ಕೃಷ್ಣ ಗೌಡ, ವಿನೋದ ನಾಯ್ಕ ಕರ್ಕಿ, ಮಾಜಿ ಪ,ಪಂ ಅಧ್ಯಕ್ಷೆ ಜೊಸ್ಪಿನ್ ಡಯಾಸ್, ಅಪಾರ ಬಂದು ಬಳಗದವರು ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು. ಹೊನ್ನಾವರದ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
Leave a Comment