• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ

August 5, 2017 by Gaju Gokarna Leave a Comment

ಹೊನ್ನಾವರ:

ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಾಲ್ಯದಲ್ಲಿ ಎಲ್ಲರಂತೆ ಚುರುಕಾಗಿರದೇ ಅಂತರ್ಮುಖಿಯಾಗರುತ್ತಿದ್ದ. ಓದಿನಲ್ಲೂ ಅಷ್ಟೇನು ಚುರುಕಿಲ್ಲದ ಈ ಹುಡುಗನನ್ನು ಕಂಡವರು ಈತನ ಅಣ್ಣನಿಗಿರುವ ಪ್ರತಿಭೆ ಈತನಲ್ಲಿಲ್ಲ ಎಂದು ಆತನ ತಂದೆ ತಾಯಿಗೆ ಪ್ರಶ್ನಿಸುತ್ತಿದ್ದರು. ಕಳೆದ ಒಂದು ವರ್ಷಗಳಿಂದ ಈತ ಬದಲಾಗಿದ್ದಾನೆ ಎಂದು ಆತನ ತಂದೆ ಪ್ರಕಾಶ ಹೆಗಡೆ ತಿಳಿಸಿದರು. ಮಗ್ಗಿಯನ್ನು ಬಾಲ್ಯದಿಂದಲೇ ಪಟಪಟನೆ ಹೇಳುವ ಜ್ಞಾಪಕ ಶಕ್ತಿ ಇವನದಾಗಿತ್ತು. ಮೊಬೈಲ್ ಫೋನ್, ಟಿವಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದ ಈ ಹುಡುಗ ಗೃಹಣ, ಭೂಕಂಪ ವಿಚಾರವನ್ನು ಟಿವಿಯಲ್ಲಿ ತಪ್ಪದೇ ಏಕಾಗ್ರತೆಯಿಂದ ನೋಡುತ್ತಾನೆ. ಕ್ಯಾಲೆಂಡರ್ ಬಗ್ಗೆ ಇವನಿಗೆ ಎಲ್ಲಿಲ್ಲದ ಆಸಕ್ತಿ. ಕ್ಯಾಲೆಂಡರ್ ಕಂಡಾಕ್ಷಣ ತದೇಕ ಚಿತ್ತದಿಂದ ಅಭ್ಯಸಿಸುತ್ತಾನೆ. ಇದೇ ಇವನ ವಿಸ್ಮಯ ಜ್ಞಾಪಕ ಶಕ್ತಿಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ಪಾಲಕರದ್ದು.
ಈತ ಮುಂಬರುವ 100 ವರ್ಷಗಳ ಯಾವ ದಿನಾಂಕದಂದು ಯಾವ ಹಬ್ಬ-ಹರಿದಿನಗಳು, ಶತಮಾನದಲ್ಲಿ ಬರುವ ಅಧಿಕ ಮಾಸಗಳು, ಕ್ಷಯ ಮಾಸಗಳು ಚಂದ್ರಮಾನ ಯುಗಾದಿ ಬರುವ ದಿನಗಳು, ಮಹಾಶಿವರಾತ್ರಿ ಬರುವ ದಿನಗಳನ್ನು ಕ್ಷಣಾರ್ಧದಲ್ಲಿ ಹೇಳುವ ಮೂಲಕ ಎಲ್ಲರಿಗೂ ಬೆರಗುಗೊಳಿಸಿದ್ದಾನೆ. ಅಷ್ಟೇ ಅಲ್ಲದೇ ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ತಿಳಿಸಿದರೆ ಹುಟ್ಟಿದ ವಾರವನ್ನು ತಿಳಿಸುತ್ತಾನೆ. ವಿಶ್ವದ ಯಾವುದೇ ದೇಶದ ಹೆಸರು ಹೇಳಿದರೆ ಆ ದೇಶದ ರಾಜಧಾನಿ ಯಾವುದು? ಅಲ್ಲಿ ಹಾದು ಹೋಗುವ ಅಕ್ಷಾಂಶ, ರೇಖಾಂಶದ ಬೆಗ್ಗೆಯೂ ಅವನಲ್ಲಿ ಅಲ್ಲಿನ ವಿಶೇಷತೆಗಳ ಬಗ್ಗೆ ಸಿದ್ಧ ಉತ್ತರ ಸಿಗುತ್ತದೆ. ಈ ಪ್ರತಿಭೆಯನ್ನು ಎಲ್ಲರಿಗೂ ಗುರುತಿಸಬೇಕು ಎಂಬ ಹಂಬಲದಿಂದ ಆತ ಕಲಿತಿರುವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾರುತಿ ಶೇಟ್ ಮಣ್ಣಿಗೆ, ಮುಖ್ಯ ಶಿಕ್ಷಕ ಕಮಾಲಕರ ಹುಲುಸ್ವಾರ್, ಸತೀಶ ಶೆಟ್ಟಿ, ಸೌಮ್ಯ ಹೆಗಡೆ ಎಲ್ಲರೂ ಸೇರಿ ಹೊನ್ನಾವರ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಬಾಲಕನ ಪ್ರತಿಭೆ ಪ್ರದರ್ಶಿಸಿದರು. ಇವನ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು. ಪತ್ರಕರ್ತ ಎಚ್.ಎಂ.ಮಾರುತಿ ಪ್ರತಿಭಾವಂತನಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಾಲಕನ ತಂದೆ ಪ್ರಕಾಶ ಹೆಗಡೆ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Trending Tagged With: 100, 50, ಅದ್ಭುತ, ಅನಿಲಗೋಡ, ಅಭ್ಯಸಿಸುತ್ತಾನೆ, ಕಂಡಾಕ್ಷಣ, ಕ್ಯಾಲೆಂಡರ್, ಕ್ಷಣಾರ್ಧ, ಕ್ಷಯ, ಗೃಹಣ, ಚಂದ್ರಮಾನ, ಚಿತ್ತದಿಂದ, ಜನತಾ, ಜ್ಞಾಪಕ, ಟಿವಿ, ತದೇಕ, ಪ್ರಕಾಶ, ಪ್ರತಿಭಾವಂತ, ಪ್ರತೀಕ್, ಫೋನ್‍, ಬಾಲಕ, ಭೂಕಂಪ, ಮಹಾಶಿವರಾತ್ರಿ, ಮಾಸಗಳು, ಮುಂದಿನ, ಮೊಬೈಲ್, ಯುಗಾದಿ, ರೇಖಾಂಶ, ವರ್ಷ, ವಿದ್ಯಾಲ, ಶಕ್ತಿಯ, ಸುಮಾರು, ಹಾಗೂ, ಹಿಂದಿನ, ಹೆಗಡೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar