ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್ನ ಶಾಲೆಯಲ್ಲಿ ಸಂಪ್ರಭಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಶ್ರೀ ಶಂಭುಲಿಂಗೇಶ್ವರ ಸಾಸ್ಕøತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಇವರ ಸಹಕಾರದಲ್ಲಿ 5ನೇ ವರ್ಷದ ನೋಟ್ಬುಕ್ ವಿತರಣಾ ಕಾರ್ಯಕ್ರಮವನ್ನು ತಾ.ಪಂ. ಸದಸ್ಯರಾಸ ಲೋಕೇಶ ಡಿ. ನಾಯ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರತೀ ವರ್ಷವೂ ಇಂತಹ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದಕ್ಕೆ ಅಭಿನಂದಿಸಿದಲ್ಲದೇ ವಿದ್ಯಾರ್ಥಿಗಳು ಇಂತಹ ದಾನಿಗಳು ನೀಡಿದ ಪಟ್ಟಿ ಪುಸ್ತಕವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಹೇಳಿದರು. ಹಾಗೂ ಮುಖ್ಯ ಅತಿಥಿಗಳಾದ ಟಿ.ಟಿ. ನಾಯ್ಕ ಮಾತನಾಡಿ ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕೆಂದು ಆಶಿಸಿಸದರು.
ಈ ಸಂಗರ್ಭದಲ್ಲಿ ಗ್ರಾ.ಪಂ. ಉಪಾದ್ಯಕ್ಷರಾದ ಸುರೇಶ ನಾಯ್ಕ, ಗ್ರಾ.ಪಂ. ಸದಸ್ಯರಾದ ಗಜಾನನ ಹೆಗಡೆ, ಎಸ್.ಡಿ.ಎಮ್. ಸಿ, ಅಧ್ಯಕ್ಷರಾದ ರಾಜು ನಾಯ್ಕ. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ದೀಕ್ಷತ್ ಹಾಗೂ ಸಹ ಶಿಕ್ಷಕರು ಹಾಜರಿದ್ದರು. ಈ ಸಂದರ್ಭದಲ್ಲಿ ದಾನಿಗಳು ಹಾಗೂ ಸಂಘಟಕರಾದ ವಿನಾಯಕ ನಾಯ್ಕ ಮೂಡ್ಕಣಿ ನೀಡಿದ ಪಠ್ಯ ಪುಸ್ತಕವನ್ನು ವಿತರಿಸಲಾಯಿತು.
Leave a Comment