• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕೆಂದು ಮನವಿ

August 12, 2017 by Sachin Hegde Leave a Comment

ಹಳಿಯಾಳ : ಕಳೆದ ಮೂರು ವರ್ಷಗಳಿಂದ ಹಳಿಯಾಳ ತಾಲೂಕು ಮತ್ತೇ ಬರಗಾಲದ ಛಾಯೆಗೆ ತುತ್ತಾಗಿದ್ದು ಹಳಿಯಾಳ ಹಾಗೂ ಜೋಯಿಡಾ ಕ್ಷೇತ್ರವನ್ನು ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು, ದನಕರುಗಳಿಗೆ ಮೇವಿನ ಹಾಗೂ ಜನತೆಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಳಿಯಾಳ ಬಿಜೆಪಿ ಘಟಕ ಹಾಗೂ ಬಿಜೆಪಿ ರೈತ ಮೋರ್ಚಾ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಘಟಕದ ನಿಯೋಗ ಜಿಲ್ಲಾಧಿಕಾರಿಗಳ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ :- ಪ್ರಸಕ್ತ ವರ್ಷವು ಮಳೆ ಕೊರತೆಯಿಂದ ಭೀಕರ ಬರಗಾಲ ಆವರಿಸಿದ್ದು ತಕ್ಷಣ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ಬಡವರು, ರೈತರಿಗೆ, ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ, ದನಕರುಗಳಿಗೆ ಮೇವು, ನೀರಿನ ವ್ಯವಸ್ಥೆ ಹಾಗೂ ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು, ಗೋವಿನ ಜೋಳದ ಬೆಂಬಲ ಬೆಲೆ ಕೇಂದ್ರ ಆಗಷ್ಟ ತಿಂಗಳ ಕೊನೆಗೆ ಎಪಿಎಮ್‍ಸಿಯಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು, ಸೆಪ್ಟಂಬರ ಮೊದಲನೇ ವಾರದಲ್ಲಿ ಗೋವಿನ ಜೋಳ ಖರೀದಿದಾರರನ್ನು ಕರೆದು ತಾಲೂಕಾಡಳಿತ ಯೋಗ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು.
ಕಬ್ಬಿಗೆ ಬೆಲೆ ನಿಗದಿಪಡಿಸಿ ಹಾಗೂ ಕಳೆದ ವರ್ಷದ ಕಬ್ಬಿನ ಬಾಕಿ ಮೊತ್ತವನ್ನು ತಕ್ಷಣ ಪಾವತಿಸಬೇಕು. ಹಳಿಯಾಳ ಪ್ಯಾರಿ ಶುಗರ್ಸ್ ಕಂಪೆನಿಯವರು ಪ್ರಥಮ ಆದ್ಯತೆಯ ಮೇರೆಗೆ ಹಳಿಯಾಳ ತಾಲೂಕಿನ ರೈತರ 80% ಅನುಪಾತದಲ್ಲಿ ಕಟಾವು ಪರವಾನಿಗೆಯನ್ನು ನೀಡಬೇಕು, ಸ್ಥಳೀಯ ಟ್ರಾಕ್ಟರ್ ಹಾಗೂ ಟ್ರಕ್‍ಗಳನ್ನು ಹೊಂದಿದಂತಹ ಸಾಗಾಣಿಕೆದಾರರಿಗೆ ಆದ್ಯತೆಯನ್ನು ನೀಡಬೇಕು. ಪ್ಯಾರಿ ಶುಗರ್ಸ್ ಕಾರ್ಖಾನೆಯು ಈವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕೊಟ್ಟಂತಹ ಮಾಹಿತಿಯನ್ನು ಬಹಿರಂಗಪಡಿಸಬೇಕು. ತೀವೃ ಬರಗಾಲ ಇರುವುದರಿಂದ ಮೇವು ಹಾಗೂ ಕುಡಿಯುವ ನೀರಿನ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹಳಿಯಾಳ ಜೋಯಿಡಾ ತಾಲೂಕುಗಳನ್ನು ಬರಗಾಲ ಪಿಡಿತ ಎಂದು ಘೊಷಿಸಬೇಕು ಹಾಗೂ ಜೋಯಿಡಾ ಮತ್ತು ರಾಮನಗರ ಭಾಗಕ್ಕೆ ಸೂಪಾ ಡ್ಯಾಂ ನೀರಿನಿಂದ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೊರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‍ಎ ಶೆಟವಣ್ಣವರ, ತಾಲೂಕಾಧ್ಯಕ್ಷ ಸಾತುರಿ ಗೋಡಿಮನಿ, ಗಣಪತಿ ಕರಂಜೆಕರ, ಅನಿಲ ಮುತ್ನಾಳ, ನಾರಾಯಣ ಕೆಸರೆಕರ, ವಿಎಮ್ ಪಾಟಿಲ್, ಅಪ್ಪು ಚರಂತಿಮಠ, ರಾಘವೆಂದ್ರ ನಾಯ್ಕ, ನಾಗರಾಜ ಗೌಡಾ, ಇಲಿಯಾಸ ಬಳಗಾರ, ವಾಸು ಪೂಜಾರಿ, ಸೊನಪ್ಪಾ ಸುಣಕಾರ ಮೊದಲಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಉದ್ಯೋಗ, ಕಾರ್ಯಪ್ರವೃತ್ತ, ಕೂಲಿಕಾರರಿಗೆ, ಖಾತ್ರಿ, ಘೊಷಿಸಬೇಕೆಂದು, ಛಾಯೆ, ಟ್ರಾಕ್ಟರ್, ತಾಲೂಕು, ತಾಲೂಕೆಂದು, ಪೀಡಿತ, ಬಡವರು, ಬರಗಾಲ, ಬರಗಾಲದ, ಮತ್ತೇ, ಮನವಿ, ರೈತರಿಗೆ, ಹಳಿಯಾಳ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar