ಹೊನ್ನಾವರ:
ಹೊನ್ನಾವರ ಸಿಟಿ ಕ್ಲಬ್ ಆಶ್ರಯದಲ್ಲಿ `ಮುದ್ದು ಕೃಷ್ಣ ಮುದ್ದು ರಾಧಾ’ ಮಕ್ಕಳ ಚದ್ಮವೇಷ ಸ್ಪರ್ಧೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು.
ಜ್ಯೂನಿಯರ್ ವಿಭಾಗದಲ್ಲಿ 64 ಮತ್ತು ಸಿನಿಯರ್ ವಿಭಾಗದಲ್ಲಿ 40 ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲೀಂ ಧರ್ಮಗಳ 104 ಮಕ್ಕಳು ಪಾಲ್ಗೊಂಡು ವಿಶೇಷ ಗಮನ ಸೆಳೆದರು. ಜ್ಯೂನಿಯರ್ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸುಬ್ರಹ್ಮಣ್ಯ ಎಸ್. ಭಟ್, ದ್ವಿತೀಯ ಬಹುಮಾನವನ್ನು ಸಾರಾ ಲೋಪಿಸ್ ಮತ್ತು ಜೊಶ್ವಾ ಫರ್ನಾಂಡಿಸ್ ಹಾಗೂತೃತೀಯ ಬಹುಮಾನವನ್ನು ಶಂತನು ಡಿ. ಭಟ್ ಮತ್ತು ಮಾಧುರಿ ನಾಯಕ ಪಡೆದುಕೊಂಡರು. ಜ್ಯೂನಿಯರ್ ಮುದ್ದು ರಾಧಾ ಸ್ಪರ್ಧೆಯಲ್ಲಿ ಕುಶಿಕಾ ಮೇಸ್ತ ಪ್ರಥಮ, ಸ್ಮøತಿ ಭಂಡಾರ್ಕರ್ ದ್ವಿತೀಯ, ಅದಿತಿ ಪ್ರಭು ತೃತಿಯ ಬಹುಮಾನ ಪಡೆದುಕೊಂಡಿದ್ದಾರೆ.
ಸೀನಿಯರ್ ಮುದ್ದು ಕೃಷ್ಣ ವಿಭಾಗದಲ್ಲಿ ಗಗನ ಜಿ ಭಟ್ ಪ್ರಥಮ, ಸೌಮ್ಯಾ ಹೆಗಡೆ ದ್ವಿತೀಯ, ಅರ್ಪಿತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸೀನಿಯರ್ ಮುದ್ದು ರಾಧಾ ವಿಭಾಗದಲ್ಲಿ ಧನ್ಯಾ ಮಹೇಶ ಕೊನೇರಿ, ಶೇಜಾ ಶನುಮ್ ಮತ್ತು ಪದ್ಮಜಾ ಎಸ್. ಪ್ರಭು ಪ್ರಥಮಸ್ಥಾನ, ಶ್ರೀರಕ್ಷಾ ಆಚಾರ್ಯ ದ್ವಿತೀಯ ಸ್ಥಾನ, ಸೌಪರ್ಣಿಕಾ ಎಚ್. ನಾಯ್ಕ ಮತ್ತು ಸನ್ನಿಧಿ ಅಶೋಕ ತಾರಿಬಾಗಿಲ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸ್ಪರ್ಧೆಯ ನಿರ್ಣಾಯಕರಾಗಿ ಉಪನ್ಯಾಸಕಿ ಕಾವೇರಿ ಡಿ ಮೇಸ್ತಾ, ಶಾರೀನಾ ಸಾಯಿದಾಸ್, ಕಲಾವಿದ ನಾಗರಾಜ ಅಂಬಿಗ ಪಾಲ್ಗೊಂಡಿದ್ದರು.
ಹೊನ್ನಾವರ ಸಿಟಿ ಕ್ಲಬ್ ಅಧ್ಯಕ್ಷ ಎಚ್.ಯು.ಪ್ರಮೋದಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಯಮಿ ರವಿ ಶೆಟ್ಟಿ ಕವಲಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು.
ಕ್ಲಬ್ ಕಾರ್ಯದರ್ಶಿ ಸುರೇಶ ಚಂದಾವರ, ಸದಸ್ಯರಾದ ಸೈಯದ್ ಹಮೀದ್, ನಿತಿನ್ ಸಾಲೇಹಿತ್ತಲ್, ಹರೀಶ ನಾಯ್ಕ, ಕುಮಾರ ನಾಯಕ, ಸಾಯಿದಾಸ್, ವಿನಾಯಕ್ ಭಟ್, ಸುನೀಲ್ ಕೆ. ಶೆಟ್ಟಿ, ಶ್ರೀಧರ್ ಮೇಸ್ತ ಉಪಸ್ಥಿತರಿದ್ದರು.
Leave a Comment