ಕಾರವಾರ:
ಅರಬ್ಬಿ ಸಮುದವೂ ಗುರುವಾರ ಬೆಳಗ್ಗೆ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದ್ದು ಇದರಿಂದ ಮೀನುಗಾರರು ಆತಂಕಗೊಂಡಿದ್ದರು. ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಲ ಜೀವಶಾಸ್ತ್ರ ಅದ್ಯಯನಕಾರರು ಆತಂಕ ಪಡುವ ಅವಷ್ಯಕತೆಯಿಲ್ಲ ಎಂದು ಮೀನುಗಾರರಿಗೆ ಸ್ಪಷ್ಟ ಪಡಿಸಿದರು.
ನಂತರ ಮಾತನಾಡಿದ ಕಡಲ ಜೀವಶಾಸ್ತ್ರ ಶಿವಕುಮಾರ ಹಾರಗಿ, ನದಿಯಿಂದ ಬಂದ ಕಲ್ಮಶ ಸಮುದ್ರ ಸೇರಿದ್ದು ಇಲ್ಲಿನ ಖನಿಜಾಂಶಗಳನ್ನು ಬಳಸಿ ಜಲಚರಗಳು ಆಹಾರ ತಯಾರಿಸುತ್ತವೆ. ಸದ್ಯ ಕಲ್ಮಶ ಹಾಗೂ ಖನಿಜಾಂಶಗಳು ಮಿಶ್ರಣಗೊಂಡಿದೆ. ಸೂರ್ಯನ ಬೆಳಕು ಪ್ರಕರವಾಗಿರುವದರಿಂದ ಕಿರಣಗಳು ನೀರಿನಾಳಕ್ಕೆ ತಲುಪುವ ಪ್ರಯತ್ನದಲ್ಲಿ ಸಮುದ್ರದಲ್ಲಿನ ಪಾಚಿ ಅತಿ ಹೆಚ್ಚು ಪ್ರಮಾಣದಲ್ಲಿ ಹೊರ ಬಂದಿದೆ. ಇದರಿಂದ ಜಲ ಚರಗಳಿಗೆ ಯಾವದೇ ತೊಂದರೆಯಿಲ್ಲ. ಮೀನುಗಾರರು ಕೂಡ ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು. ನೀರಿನ ಮಾದರಿಯನ್ನು ಕೊಂಡೊಯ್ದ ವಿದ್ಯಾರ್ಥಿಗಳು ಈ ಬಗ್ಗೆ ಇನ್ನಷ್ಟು ಅದ್ಯಯನ ನಡೆಸಲಿದ್ದಾರೆ ಎಂದು ತಿಳಿಸಿದರು.
Leave a Comment