• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

“ಸರ್ವಂ ಆಧಾರಮಯಂ”

September 14, 2017 by Gaju Gokarna Leave a Comment

ಹೊನ್ನಾವರ :-

ಇಂದು ದೇಶದಲ್ಲಿ ಯಾವುದೇ ವ್ಯವಸ್ಥೆಯ ಪ್ರಯೋಜನ ಪಡೆಯಬೇಕಾದರೆ ಆಧಾರ ಕಾರ್ಡ್ ಅವಶ್ಯವೆಂಬುದು ಸರ್ಕಾರದ ಆದೇಶವಾಗಿದೆ. ಅಂದರೆ “ಸರ್ವಂ ಆಧಾರಮಯಂ” ಎನ್ನುವಂತಾಗಿದೆ. ಆದರೆ ಕಳೆದ 5 ವರ್ಷಗಳಿಂದ ಆಧಾರ ಕಾರ್ಡುಗಳಿಗಾಗಿ ಅಲೆಯುತ್ತಿರುವ ಬಡಕುಟುಂಬಗಳು, ಅಸಹಾಯಕರು, ಸಾವಿರ-ಸಾವಿರ ಸಂಖ್ಯೆಯಲ್ಲಿ ಇದ್ದಾರೆ. 2013 ರಿಂದ ಇಲ್ಲಿ ತನಕ ನಾಲ್ಕು ಬಾರಿ ಆಧಾರಕಾರ್ಡ್‍ಗಾಗಿ ಬಯೋ ಮೆಟ್ರಿಕ್ ಮಾಡಿಸಿ ನೂರಾರು ಸಲ ಕಛೇರಿಗಳಿಗೆ ಅಲೆದಾಡಿದರೂ ಸಹ ಯಾವುದೇ ಪ್ರಯೋಜನವಾಗದಿರುವುದು ಅರಣ್ಯರೋಧನದಂತಾಗಿದೆ.
ಹೊನ್ನಾವರ ತಾಲೂಕ ಅನಿಲಗೋಡ ಗ್ರಾಮದ ಮಕ್ಕಿಗದ್ದೆ ನಿವಾಸಿ ಕಾಲೇಜು ವಿದ್ಯಾರ್ಥಿನಿ ಪೂಜಾ ಬಾಲಕೃಷ್ಣ ನಾಯ್ಕ ಇವಳನ್ನು ಉದಾಹರಣೆಗಾಗಿ ನೀಡಲಾಗಿದೆ. ಕಾರಣ ಬಯೋ ಮೆಟ್ರಿಕ್ ತಯಾರಿಸಲು ಹಳ್ಳಿಗಳಿಗೆ ಬಂದ Enrolment Operator  ಗಳಿಂದ ಉಂಟಾದ ತಾಂತ್ರಿಕ ಲೋಪದೋಷಗಳೇ ಕಾರಣ. ಹೊರತು ಜನಸಾಮಾನ್ಯರು ಕೇಳಿದ ಎಲ್ಲಾ ದಾಖಲೆ ನೀಡಿ ಸಹಕರಿಸಿದ್ದಾರೆ. ಈ Enrolment Operator  ಗಳು ಮಾಡಿದ ತಪ್ಪಿನಿಂದಾಗಿ ಜಿಲ್ಲೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಆಧಾರಕಾರ್ಡ್ ಪಡೆಯಲಾಗದೇ ಹತ್ತು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲಿಯೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಇಲ್ಲದೇ ತೀರಾ ಸಮಸ್ಯೆಗೆ ಒಳಗಾಗಿದ್ದಾರೆ. ಬಡಕುಟುಂಬದ ವಿದ್ಯಾರ್ಥಿಗಳು ಒಂದೆಡೆ ಬಿ.ಪಿ.ಎಲ್.ಕಾರ್ಡಿನಲ್ಲಿ ಹೆಸರನ್ನು ಕಳೆದುಕೊಂಡು ಪಡಿತರ ವ್ಯವಸ್ಥೆ ಸಿಗದಂತಾಗಿದೆ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲಾಗದೇ, ತೆರೆದರೆ ಆಧಾರ್ ಲಿಂಕ್ ಮಾಡಲಾಗದೇ ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಡಕುಟುಂಬದ ವಿದ್ಯಾರ್ಥಿಗಳಿಗಾದ ಅನ್ಯಾಯ ಹಾನಿಯನ್ನು ತುಂಬಿಸಿಕೊಡುವವರ್ಯಾರು ಎನ್ನುವ ಪ್ರಶ್ನೆಯಾಗಿದೆ. ಈ ಕುರಿತು ಉತ್ತರಕನ್ನಡ ಜಿಲ್ಲಾ ದಿ|| ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರು ಕಳೆದ 6 ತಿಂಗಳ ಹಿಂದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈ ತನಕ ಆದಂತ ಲೋಪ ದೋಷ ಸರಿಪಡಿಸುವಲ್ಲಿ ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದ್ದು ಕಂಡುಬಂದಿಲ್ಲ. ಆಧಾರ್ ಕಾರ್ಡ್ ತಯಾರಿಸುವಲ್ಲಿ ಟೆಂಡರ್ ಪಡೆದ ಸಂಸ್ಥೆ ಆದ ಲೋಪ ದೋಷಗಳನ್ನು ಸರಿಪಡಿಸುವ ಇಚ್ಛಾಶಕ್ತಿ ಹೊಂದಿಲ್ಲವೋ ಅಥವಾ ಸರ್ಕಾರ ಸೂಕ್ತ ಮಾರ್ಗದರ್ಶನ, ಆದೇಶ ನೀಡಿಲ್ಲವೋ ತಿಳಿಯಲಾಗಿದೆ ಆದ ಕಾರಣ ಮತ್ತೊಮ್ಮೆ ಸರ್ಕಾರವನ್ನು ಆಗ್ರಹಿಸಿ ಮಾನ್ಯ ರಾಜ್ಯಪಾಲರಿಗೂ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೂ ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿಕೊಳ್ಳಲಾಗಿದೆಯೆಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ದೀಪಕ್ ಲೋಬೋ ಕೋಡಾಣಿ, ಮಂಜುನಾಥ ಹಳ್ಳೇರ ಹಾಡಗೇರಿ, ದೇವೇಂದ್ರ ನಾಯ್ಕ ಹುಂಜನಮಕ್ಕಿ ಇವರು ಪತ್ರಿಕೆಗೆ ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: Enrolment Operator, ಅಸಹಾಯಕರು, ಆಧಾರ ಕಾರ್ಡ್ ಅವಶ್ಯ, ಆಧಾರ್ ಕಾರ್ಡ್ ತಯಾರಿಸುವಲ್ಲಿ ಟೆಂಡರ್, ಕಾಲೇಜು ವಿದ್ಯಾರ್ಥಿನಿ, ನೂರಾರು ಸಲ ಕಛೇರಿ, ಪೂಜಾ ಬಾಲಕೃಷ್ಣ, ಪ್ರಯೋಜನ ಪಡೆಯಬೇಕಾದರೆ, ಬಡಕುಟುಂಬಗಳು, ಬಯೋ ಮೆಟ್ರಿಕ್ ಮಾಡಿಸಿ, ಬಿ.ಪಿ.ಎಲ್.ಕಾರ್ಡಿನಲ್ಲಿ ಹೆಸರ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೂ, ಮಕ್ಕಿಗದ್ದೆ ನಿವಾಸಿ, ವ್ಯವಸ್ಥೆಯ, ಸರ್ವಂ ಆಧಾರಮಯಂ, ಸಾವಿರ-ಸಾವಿರ ಸಂಖ್ಯೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar