• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ

September 24, 2017 by Sachin Hegde Leave a Comment

ಕಾರವಾರ: ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮವು ” ಪರಿಶಿಷ್ಟ ಜಾತಿ ”  (ಪರಿಶಿಷ್ಟ ಜಾತಿ ಬೋವಿ , ವಡ್ಡರ ಹೊರತುಪಡಿಸಿ) ಜನರ ಆರ್ಥಿಕಾಭಿವೃದ್ದಿಗಾಗಿ ನೇರವಾಗಿ ನಿಗಮದಿಂದ ನೇರಸಾಲ ಹೈನುಗಾರಿಕೆ ಯೋಜನೆ , ಮೈಕ್ರೋ ಕ್ರೇಡಿಟ್ -1 , ಮೈಕ್ರೋ ಕ್ರೇಡಿಟ್ ಕಿರುಸಾಲ ಮತ್ತು ಮಹಿಳಾ ಸಮೃದ್ದಿ  ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ.
   ಅರ್ಜಿದಾರರು ಪರಿಶಿಷ್ಟ ಜಾತಿಗೆ  ಸೇರಿರಬೇಕು, ಹಾಲಿ ಕರ್ನಾಟಕದಲ್ಲಿ Pಳೆದ 15 ವರ್ಷಗಳಿಂದ ವಾಸಿಸುತ್ತಿರಬೇಕು. ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರು 81 ಸಾವಿರ, ನಗರ ಪ್ರದೇಶದವರಿಗೆ ಒಂದು ಲಕ್ಷ ನಾಲ್ಕು ಸಾವಿರ  ಮೀರಿರಬಾರದು. 18 ರಿಂದ 60 ವರ್ಷದೊಳಗೆ ಇರಬೇಕು. ಮೈಕ್ರೋ ಕ್ರೇಡಿಟ್ ಕಿರುಸಾಲ ಯೋಜನೆ: ಈ ಯೋಜನೆಯಡಿ ಗ್ರಾಮಿಣ ಅರೆ ನಗರ ಮತ್ತು ನಗರ ಪ್ರದೇಶಗಲ್ಲಿನ ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿಯ ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಲ್ಲಿ ತೋಡಿಕೊಳ್ಳಲು ಪ್ರತಿಯೊಬ್ಬ ಫಲಾಪೇಕ್ಷಿಗೆ ಗರಿಷ್ಟ ಮೊತ್ತ ರೂ 15,000/- ( ರೂ 10,000/- ಸಹಾಯದನ ಮತ್ತು ರೂ 5,000/- ಬೀಜಧನ ) ಮಹಿಳಾ ಫಲಾಪೇಕ್ಷಿಗಳಿಗೆ ಮಂಜುರುಮಾಡಲಾಗುವುದು. ಸದರಿ ಯೋಜನೆಯಡಿ ಕನಿಷ್ಟ 10 ಹಾಗೂ ಅದಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಸದಸ್ಯರಿರಬೇಕು)
ನೇರಸಾಲ (ಡೈರಿ) ಯೋಜನೆ:. ಘಟಕ ವೆಚ್ಚ ಗರಿಷ್ಟ ಮೊತ್ತ ರೂ 40 ಸಾವಿರವಾಗಿದ್ದು ಇದರಲ್ಲಿ ರೂ 15 ಸಾವಿರ ಅವದಿ ಸಾಲವಾಗಿರುತ್ತದೆ. ಅವದಿಸಾಲ ಶೇ 6% ರಷ್ಟು ಬಡ್ಡಿಯನ್ನು ವಿದಿಸಲಾಗುವುದು. ಉಳಿದ ರೂ 25 ಸಾವಿರ ಸಹಾಯಧನವಾಗಿರುತ್ತದೆ. ಈ ಸಾಲ ಸೌಲಭ್ಯವನ್ನು ವೈಯಕ್ತಿಕ ಫಲಾಪೇಕ್ಷಿಗಳಿಗೆಗೆ ಹಸು ಖರಿದಿಸಲು  ಸಾಲ ಒದಗಿಸಲಾಗುವುದು. ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರಾಗಿರಬೇಕು.
ಮೈಕ್ರೋ ಕ್ರೇಡಿಟ್ -1 ಯೋಜನೆ: ಘಟಕ ವೆಚ್ಚ ಗರಿಷ್ಟ ಮೊತ್ತ ರೂ 25 ಸಾವಿರವಾಗಿದ್ದು ಇದರಲ್ಲಿ ರೂ 15 ಸಾವಿರ ಬೀಜದನ ಸಾಲವಾಗಿರುತ್ತದೆ. ಬೀಜ ಧನಕ್ಕೆ ಶೇ 4% ರಷ್ಟು ಬಡ್ಡಿಯನ್ನು ವಿದಿಸಲಾಗುವುದು. ಉಳಿದ ರೂ 10 ಸಾವಿರ ಸಹಾಯಧನವಾಗಿರುತ್ತದೆ. ಈ ಸಾಲ ಸೌಲಭ್ಯವನ್ನು ವೈಯಕ್ತಿಕ ಫಲಾಪೇಕ್ಷಿಗಳಿಗೆಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಒದಗಿಸಲಾಗುವುದು. ಪುರುಷ ಮತ್ತು ಮಹಿಳಾ ಫಲಾಪೇಕ್ಷಿಗಳಿಗೆ ಮಂಜುರುಮಾಡಲಾಗುವುದು
ವಿಕಲಚೇತನರಿಗೆ ನೆರವು ಯೋಜನೆ: ಈ ಯೋಜನೆಯಡಿ ಶೇ 40 ಅಂಗವಿಕಲತೆ ಇರುವ ಫಲಾಪೇಕ್ಷಿಗಳಿಗೆ ನಿಗಮದಿಂದ ನೇರಸಾಲ ಸವಲಭ್ಯ ಕಲ್ಪಿಸಲಾಗುವುದು. ಘಟಕ ವೆಚ್ಚ ರೂ 25 ಸಾವಿರಗಳಾಗಿದ್ದು ಇದರಲ್ಲಿ ಸಹಾಯಧನ ರೂ 10 ಸಾವಿರ ಮತ್ತು ಬೀಜಧನ ರೂ 15 ಸಾವಿರವಾಗಿರುತ್ತದೆ. ಬೀಜದನ ಸಾಲವನ್ನು ಶೇ 4%ರ ಬಡ್ಡಿದರದಲ್ಲಿ 36 ಕಂತುಗಳಲ್ಲಿ ಸಾಲ ಮರುಪಾವತಿಸಬೇಕು.
 ಮಹಿಳಾ ಸಮೃದ್ದಿ ಯೋಜನೆ: ಘಟಕ ವೆಚ್ಚ ಗರಿಷ್ಟ ಮೊತ್ತ ರೂ 25 ಸಾವಿರವಾಗಿದ್ದು, ಇದರಲ್ಲಿ ರೂ 15 ಸಾವಿರ ಬೀಜದನ ಸಾಲವಾಗಿರುತ್ತದೆ. ಬೀಜ ಧನಕ್ಕೆ ಶೇ 4% ರಷ್ಟು ಬಡ್ಡಿಯನ್ನು ವಿದಿಸಲಾಗುವುದು. ಉಳಿದ ರೂ 10 ಸಾವಿರ ಸಹಾಯಧನವಾಗಿರುತ್ತದೆ. ಈ ಸಲ ಸೌಲಭ್ಯವನ್ನು ಮಹಿಳಾ ವೈಯಕ್ತಿಕ ಫಲಾಪೇಕ್ಷಿಗಳಿಗೆಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಒದಗಿಸಲಾಗುವುದು.
ಅರ್ಜಿ ಸಲ್ಲಿಸುವವರು ಬಿಳಿಹಾಳೆಯಲ್ಲಿ   ಅರ್ಜಿದಾರನ ಹೆಸರು , ತಂದೆಯ ಹೆಸರು , ವಿಳಾಸ , ವಯಸ್ಸು , ಜಾತಿ ಮತ್ತು ಉಪಜಾತಿ , ವಿದ್ಯಾರ್ಹತೆ ಸಾಲದ ಉದ್ದೇಶ ಸಾಲ ಕೋರಿರುವ ಉದ್ದೇಶದಲ್ಲಿ ಇರುವ ಅನುಭವ , ತಮ್ಮ ಸೇವಾ ವ್ಯಾಪ್ತಿಗೆ ಬರುವ ಬ್ಯಾಂಕ್ ಪಾಸ ಪುಸ್ತಕ ಪ್ರತಿ,  ಅರ್ಜಿಯ ಜೊತೆ ಜಾತಿ ಪತ್ರ (ಡಿ-ನಮೂನೆ) , ಆಧಾಯ ಪತ್ರ , ಪೋಟೋ , ರೇಷನ್ ಕಾರ್ಡ , ಬಿಪಿಎಲ್ ಕಾರ್ಡ , ಆಧಾರ ಕಾರ್ಡ, ಇತ್ಯಾದಿ ದಾಖಲಾತಿಗಳ ಪ್ರತಿಗಳನ್ನು ಲಗತ್ತಿಸಿ ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 10 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು , ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ ನಿಯಮಿತ. ಹಳೆ ಜಿಲ್ಲಾ ಪಂಚಾಯತ್ ಕಟ್ಟಡ, ತಹಸಿಲ್ದಾರ ಕಚೇರ ಹಿಂಬಾಗ, ನೆಲಮಹಡಿ,  ದೂರವಾಣಿ ಸಂಖ್ಯೆ 08382-226903  ಉತ್ತರ ಕನ್ನಡ ಜಿಲ್ಲೆ ,ಕಾರವಾರ ಇವರಿಗೆ ನೇರವಾಗಿ ಇಲ್ಲವೆ ಅಂಚೆ ಮುಖಾಂತರ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ತಾಲೂಕಾ ಮಟ್ಟದಲ್ಲಿ ನಿಗಮದ ತಾಲೂಕಾ ಅಭಿವೃದ್ದಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: 6, 81 ಸಾವಿರ, ಆಧಾಯ ಪತ್ರ, ಆಧಾರ ಕಾರ್ಡ, ಇತ್ಯಾದಿ, ಕಾರವಾರ 40 ಅಂಗವಿಕಲತೆ, ಕಿರುಸಾಲ, ಗ್ರಾಮಿಣ ಅರೆ ನಗರ ಮತ್ತು ನಗರ ಪ್ರದೇಶ, ಜಾತಿ ಮತ್ತು ಉಪಜಾತಿ, ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ, ದೂರವಾಣಿ ಸಂಖ್ಯೆ 08382-226903 ಉತ್ತರ ಕನ್ನಡ ಜಿಲ್ಲೆ, ನಗರ ಪ್ರದೇಶದವರಿಗೆ ಒಂದು ಲಕ್ಷ, ನೆಲಮಹಡಿ, ನೇರಸಾಲ ಹೈನುಗಾರಿಕೆ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ಬೋವಿ, ಪೋಟೋ, ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ, ಬಿಪಿಎಲ್ ಕಾರ್ಡ, ಮೈಕ್ರೋ ಕ್ರೇಡಿಟ್, ಮೈಕ್ರೋ ಕ್ರೇಡಿಟ್ -1, ರೇಷನ್ ಕಾರ್ಡ, ವಡ್ಡರ ಹೊರತುಪಡಿಸಿ, ವಯಸ್ಸು, ವಿದ್ಯಾರ್ಹತೆ, ಸಾಲ ಸೌಲಭ್ಯ ಕಲ್ಪಿಸಲು ಅರ್ಜಿ ಆಹ್ವಾನ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,116 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar