ಹೊನ್ನಾವರ:
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಸರ್ಕಾರದಿಂದ ಒದಗಿಸಲಾದ 148 ಬೈಸಿಕಲ್ಗಳನ್ನು 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಬೈಸಿಕಲ್ ವಿತರಿಸಿ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಜೈನಾಬಿ ಇಸ್ಮಾಯಿಲ್ ಸಾಬ್ ಮಾತನಾಡಿ ವಿದ್ಯಾರ್ಥಿಗಳಿಗೆ, ಸರ್ಕಾರದಿಂದ ಉಚಿತವಾಗಿ ಕೊಡಲಾಗುವ ಬಿಸಿಯೂಟ, ಕ್ಷೀರಭಾಗ್ಯ, ಬೈಸಿಕಲ್ಗಳ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಕರೆನೀಡಿದರು.
ಪ.ಪಂ. ಸದಸ್ಯರಾದ ಸುರೇಶ ಶೇಟ್ ಮಾತನಾಡಿ ಶಾಲಾ ಪರಿಸರ, ಗುಣಮಟ್ಟದ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೆ.ಟಿ. ಪೈ ಅಧ್ಯಕ್ಷತೆವಹಿಸಿ ಮಾತನಾಡಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸ ಕುರಿತು ಕಾಳಜಿ ವಹಿಸಬೇಕು ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧವಾಗಿದೆ ಎಂದರು. ಮುಖ್ಯಾಧ್ಯಾಪಕ ವಿ.ಎಸ್. ಅವಧಾನಿ ಸ್ವಾಗತಿಸಿದರು. ಶಂಕರ ಹೆಗಡೆ ವಂದಿಸಿದರು. ಅಶ್ವಿನಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment