ಹೊನ್ನಾವರ ತಾಲೂಕಿನ ಕೆಳಗಿನೂರು ಹೊಳ್ಳಾಕುಳಿಯಲ್ಲಿ ನಿರ್ಮಾಣಗೊಳ್ಳಲಿರುವ ಒಕ್ಕಲಿಗರ ಸಮುದಾಯ ಸಭಾಭವನ ಕಾಮಗಾರಿ ಸ್ಥಳಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉಧ್ಯಮಶೀಲ ಸಚಿವರಾದ ಅನಂತಕುಮಾರ ಹೆಗಡೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯ ಒಕ್ಕಲಿಗ ಮುಖಂಡರೊಂದಿಗೆ ಮಾತನಾಡಿದ ಸಚಿವರು ಕೇಂದ್ರ ಸರಕಾರದಿಂದ ಸಮುದಾಯ ಭವನಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಒಕ್ಕಲಿಗರ ಸಂಘಟನೆಯ ವತಿಯಿಂದ ಕೇಂದ್ರ ಸಚಿವರಿಗೆ ಗೌರವಾರ್ಪಣೆ ಸಲ್ಲಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಮ್.ಎಚ್.ಗೌಡ, ಶಂಭು ಗೌಡ, ತಾ.ಪಂ ಸದಸ್ಯ ಗಣಪಯ್ಯ ಗೌಡ, ಚಿತ್ತಾರ ಗ್ರಾ.ಪಂ. ಉಪಾಧ್ಯಕ್ಷ ಗಣಪತಿ ಗೌಡ ಚಿತ್ತಾರ, ಬಿಜೆಪಿ ತಾ. ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ, ಬಿಜೆಪಿ ಮುಖಂಡರಾದ ಸುನಿಲ್ ನಾಯ್ಕ, ಉಮೇಶ ನಾಯ್ಕ, ವಿನೋದ ನಾಯ್ಕ ಉಪಸ್ಥಿತರಿದ್ದರು.
Leave a Comment