ಹೊನ್ನಾವರ,ಪಟ್ಟಣ ದುರ್ಗಾಕೇರಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಶ್ರೀ ಕ್ಷೇತ್ರ ಬಂಗಾರಮಕ್ಕಿ , ಇದರ ಆಡಳಿತಕ್ಕೊಳಪಟ್ಟಿರುವ ಉತ್ತರ ಕನ್ನಡದ ಹೊನ್ನಾವರದ ದುರ್ಗಾಕೇರಿಯ ದತ್ತಮಂದಿರದಲ್ಲಿ ‘ ದತ್ತ ಜಯಂತ್ಯುತ್ಸವ’ ಕಾರ್ಯಕ್ರಮವು ಬಹಳ ವಿಜ್ರಂಭಣೆಯಿಂದ ಜರುಗಿತು. ಮಾರ್ಗಶಿರ ಶುದ್ಧ ಹುಣ್ಣಿಮೆಯಂದು ಬಂಗಾರಮಕ್ಕಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಭಜನೆಯೊಂದಿಗೆ ಆರಂಭಗೊಂಡಿತು. ದತ್ತಾತ್ರೇಯ ಮೂಲಮಂತ್ರ ಹವನ, ಪೂಜೆ ಪುನಸ್ಕಾರಗಳು, ತೊಟ್ಟಿಲು ಪೂಜೆ, ಅನ್ನಸಂತರ್ಪಣೆ ಹಾಗೂ ಅಹೋರಾತ್ರಿ ಭಜನಾ ಕಾರ್ಯಕ್ರಮಗಳೂ ಕೂಡಾ ನಡೆದವು ಹಾಗೂ ಮರುದಿನ ಬೆಳಿಗ್ಗೆ ಭಿಕ್ಷಾಟನೆ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದ ಮೂಲಕ ಉತ್ಸವವು ಮುಕ್ತಾಯಗೊಂಡಿತು. ಈ ಉತ್ಸವದಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
Leave a Comment