• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಮನ ಸೆಳೆದ ಪೇಂಟ್‍ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ

December 10, 2017 by Sachin Hegde Leave a Comment

ಕಾರವಾರ: “ಕರಾವಳಿ ಉತ್ಸವ – 2017″ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು.
ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್‍ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ ಸೆಳೆಯಿತು. ಜಿಲ್ಲೆಯಲ್ಲಿಯೇ ಮೊದಲ ಭಾರಿ ಆಯೋಜಿಸಿದ್ದ ಪೇಂಟ್ ಬಾಲ್ ಕ್ರೀಡೆ ಪ್ರಮುಖ ಆಕರ್ಷಣೆಗೆ ಕಾರಣವಾಯಿತು. ಮಾಲಾದೇವಿ ಮೈದಾನದಲ್ಲಿ ಬಣ್ಣದ ಬುಲೆಟ್‍ಗಳು ಹೊರಬರದಂತೆ ನಿರ್ಮಿಸಿದ ಪರದೆಯೊಳಗೆ ನಡೆದ ಸಾಹಸಿ ಕ್ರೀಡೆಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ನೌಕಾನೆಲೆ ಹಾಗೂ ಪೊಲೀಸರು ಬಣ್ಣದ ಜಾಕೇಟ್, ಹೇಲ್ಮೆಟ್ ಸೇರಿದಂತೆ ಇನ್ನಿತರ ಸುರಕ್ಷತಾ ಪರಿಕರಣಗಳನ್ನು ತೊಟ್ಟ ಆಟಗಾರರು ಕಣಕ್ಕಿಳಿದು ಬಣ್ಣದ ಬುಲೆಟ್‍ಗಳ ಕದನ ನಡೆಸಿದರು. ಸುಮಾರು 20 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಕೊನೆಗೆ ನೌಕಾನೆಲೆ ತಂಡ ಎದುರಾಳಿ ತಂಡದ ಎಲ್ಲರನ್ನು ಫೈರ್ ಮಾಡಿ ಗೆಲುವು ಸಾಧಿಸಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಷೋತ್ತಮ ವಿಜೆತರಿಗೆ ಪ್ರಶಸ್ತಿ ವಿತರಿಸಿದರು. ಬೀಚ್ ಬಾಲಿಬಾಲ್ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕಾರವಾರ ತಂಡ ಪ್ರಥಮ ಸ್ಥಾನ ಪಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರ 6 ತಂಡ ಹಾಗೂ ಪುರಷರ 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಅಂತಿಮವಾಗಿ ಮಹಿಳಾ ವಿಭಾಗದಲ್ಲಿ ಕಾರವಾರ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದುಕೊಂಡರು. ಪುರಷರ ವಿಭಾಗದಲ್ಲಿ ಕಾರವಾರ ಪ್ರಥಮ ಹಾಗೂ ಶಿರಸಿ ತಂಡ ದ್ವಿತೀಯ ತಂಡ ಪಡೆಯಿತು.

H08 KAR12

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karwar News Tagged With: ಕರಾವಳಿ ಉತ್ಸವ - 2017, ಗಮನ ಸೆಳೆದ, ಠಾಗೋರ ಕಡಲತೀರ, ನಡೆದ, ನೌಕಾನೆಲೆ ತಂಡ ಎದುರಾಳಿ ತಂಡ, ಪಂದ್ಯ, ಪೇಂಟ್‍ಬಾಲ್, ಪೊಲೀಸರು ಬಣ್ಣದ ಜಾಕೇಟ್, ಬೀಚ್ ವಾಲಿಬಾಲ್, ಮಾಲಾದೇವಿ ಮೈದಾನ, ಹೇಲ್ಮೆಟ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...