• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಡಯಾಲಿಸ್ (ರಕ್ತ ಶುದ್ಧೀಕರಣ) ಘಟಕವನ್ನು ಕೂಡಲೇ ಲೋಕಾರ್ಪಣೆ ಮಾಡಿ ಸ್ಥಳೀಯ ರೋಗಿಗಳಿಗೆ ಅನುಕೂಲ ಮಾಡಿ

January 5, 2018 by Gaju Gokarna Leave a Comment

ಹೊನ್ನಾವರ ತಾಲೂಕು ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಹೊಂದಿದ್ದು, 28 ಗ್ರಾಮ ಪಂಚಾಯತ ಹಾಗೂ ಒಂದು ಪಟ್ಟಣ ಪಂಚಾಯತ ವ್ಯಾಪ್ತಿಯನ್ನು ಹೊಂದಿದೆ. ಭಟ್ಕಳ ಹಾಗೂ ಹೊನ್ನಾವರ ವಿಧಾನಸಭಾ ವ್ಯಾಪ್ತಿಯನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳು ಹಳ್ಳ, ನದಿ, ಗುಡ್ಡ, ಕಾಡುಗಳನ್ನು ಹೊಂದಿದ್ದು, ಇಲ್ಲಿ ಅಂದಾಜು 2.50 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಇಲ್ಲಿ ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೀನುಗಾರರು, ಶೋಷಿತ ವರ್ಗದವರು ಇತರರು ವಾಸಿಸುವ ಪ್ರದೇಶವಾಗಿದ್ದು ಗ್ರಾಮೀಣ ಪ್ರದೇಶವು ತಾಲೂಕು ಕೇಂದ್ರಕ್ಕೆ ಸುಮಾರು 80-100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಇಲ್ಲಿಯ ಮುಖ್ಯ ಬೆಳೆ ಅಡಿಕೆ, ತೆಂಗು, ವಿಳ್ಯದೆಲೆ ಹಾಗೂ ಮೀನುಗಾರಿಕೆ ಇತರ ಉಪ ಬೆಳೆಯಿಂದ ತಮ್ಮ ಜೀವನ ಸಾಗಿಸುತ್ತಾರೆ. ಇಲ್ಲಿ ಯಾವುದೇ ಉದ್ಯೋಗ ನೀಡುವ ಕೈಗಾರಿಕೆಗಳಾಗಲಿ, ಕಾರ್ಖಾನೆಗಳಾಗಲಿ, ಉನ್ನತ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಕೃಷಿ ಹಾಗೂ ಮೀನುಗಾರಿಕೆಯನ್ನೇ ಅವಲಂಬಿಸಿ ಜೀವಿಸುವಂತಾಗಿದೆ. ಇಲ್ಲಿಯ ಜನರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸಮರ್ಥ ವೈದ್ಯರನ್ನು ಹೊಂದಿದ್ದು, ಒಳ ಹಾಗೂ ಹೋರ ರೋಗಿಗಳು ಹಾಗೂ ಹೆರಿಗೆ ಇನ್ನಿತರ ಎಲ್ಲಾ ಸೌಲಭ್ಯವನ್ನು ಬಹುತೇಕ ಜನರು ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರುಗಳ ಕಾರ್ಯಕ್ಷಮತೆಯನ್ನು ಸಾರ್ವಜನಿಕರಿಂದ ಪ್ರಶಂಸೆ ಕೇಳಿಬರುತ್ತಿದ್ದು ತಾಲೂಕಿನ ಎಲ್ಲಾ ಬಡ ಜನರಿಗೆ ಅನುಕೂಲವಾಗುತ್ತದೆ. ರಕ್ತ ಶುದ್ಧೀಕರಣ ಘಟಕ ಪ್ರಾರಂಭವಾಗದೇ ಇರುವುದರಿಂದ ಸ್ಥಳೀಯ ರೋಗಿಗಳಿಗೆ ತೊಂದರೆಯಾಗುತ್ತದೆ.
ಈ ಹಿಂದೆ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ದಿನಾಲು ನೂರಾರು ರೋಗಿಗಳು ಮಂಗಳೂರು, ಉಡುಪಿ, ಗೋವಾ ಹಾಗೂ ಹುಬ್ಬಳ್ಳಿಗೆ ಖಾಸಗಿ ವಾಹನ ಬಾಡಿಗೆ ಪಡೆದು ಸುಮಾರು 200 ಕಿ.ಮೀ ದೂರ ಸಾಗಬೇಕಾಗುತ್ತದೆ. ಹಾಗೂ ಒಂದು ದಿನಕ್ಕೆ ವಾಹನ ಬಾಡಿಗೆ ಹಾಗೂ ಇತರೆ ಸೇರಿ 8 ರಿಂದ 10 ಸಾವಿರ ಖರ್ಚಾಗುತ್ತಿತ್ತು. ವಾರಕ್ಕೆ ಎರಡು ಬಾರಿ ಚಿಕಿತ್ಸೆ ಪಡೆಯುವವರಿಗೆ ಬಾರಿ ದುಂದು ವೆಚ್ಚ ಆಗುತ್ತಿತ್ತು. ಅವಲಂಬಿತ ಕುಟುಂಬದವರಿಗೆ ಭರಿಸಲಾಗದ ಆರ್ಥಿಕ ಹೊರೆ ಹಾಗೂ ಸಾಲ ಸೂಲವಾಗುತ್ತಿತ್ತು. ಈ ಹಿಂದೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಪ್ರಾರಂಭಿಸಬೇಕೆಂದು ಸರ್ಕಾರಕ್ಕೆ ಕಳೆದ ಒಂದು ವರ್ಷದ ಹಿಂದೆ ಮನವಿ ನೀಡಿದ್ದು ಮತ್ತು ಸಾರ್ವಜನಿಕರ ಬಹುದಿನಗಳ ಬೇಡಿಕೆ ಆಗಿತ್ತು. ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆಯನ್ನು ಹೊಂದಿದ್ದು ಹೊಸ ಕಟ್ಟಡವನ್ನು ಹೊಂದಿದ್ದು, ಈಗಾಗಲೇ ಡಯಾಲಿಸಿಸ್ ಘಟಕ ಮಂಜೂರಾಗಿದ್ದು ಆಸ್ಪತ್ರೆಯ ಸ್ಥಳದಲ್ಲಿ ಜೋಡಿಸಿ ಎರಡು ತಿಂಗಳು ಕಳೆದಿರುತ್ತದೆ. ಸುಸಜ್ಜಿತ ಕಟ್ಟಡ ಹಾಗೂ ಸಿಬ್ಬಂದಿಗಳು, ಉಪಕರಣಗಳು ಇದ್ದಾಗ್ಯೂ ಘಟಕವು ಪ್ರಾರಂಭಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ. ಮತ್ತು ಸ್ಥಳೀಯ ರೋಗಿಗಳಿಗೆ ಅನುಕೂಲವಾಗುವಂತೆ ಕೂಡಲೇ ರಕ್ತ ಶುದ್ಧಿಕರಣ ಘಟಕವನ್ನು ಲೋಕಾರ್ಪಣೆ ಮಾಡಬೇಕು. ಸರ್ಕಾರದ ಯೋಜನೆ ಸರಿಯಾದ ಮಾಹಿತಿ ಬಡರೋಗಿಗಳಿಗೆ ತಲುಪುವಂತೆ ಮಾಡಲು ಕೂಡಲೇ

 

ಸದ್ರಿ ರಕ್ತ ಶುದ್ಧೀಕರಣ ಘಟಕವನ್ನು 15 ದಿನದ ಒಳಗೆ ಪ್ರಾರಂಭಿಸದೇ ಇದ್ದಲ್ಲಿ ಜನಪರ ಸಂಘಟನೆ ಹಾಗೂ ಬಡರೋಗಿಗಳ ಜೊತೆ ಸೇರಿ ಉಗ್ರ
ಹೋರಾಟ ಮಾಡುತ್ತಾರೆಂದು ಎಂದು ರಾಜ್ಯ ಜೆ ಡಿ ಎಸ್ ಕಾರ್ಯದರ್ಶಿ ಜಿ ಎನ್ ಗೌಡ ತಿಳಿಸಿದ್ದಾರÉ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: 80-100 ಕಿ.ಮೀ ವ್ಯಾಪ್ತಿ, ಅಂದಾಜು 2.50 ಲಕ್ಷ ಜನಸಂಖ್ಯೆ, ಅನುಕೂಲ ಮಾಡಿ, ಅಲ್ಪಸಂಖ್ಯಾತರು, ಆಸ್ಪತ್ರೆಯಲ್ಲಿ ಚಿಕಿತ್ಸೆ, ಕಾಡು, ಕೂಡಲೇ, ಗುಡ್ಡ, ಘಟಕ, ಡಯಾಲಿಸ್, ನದಿ, ಮೀನುಗಾರರು, ರಕ್ತ ಶುದ್ಧೀಕರಣ, ಲೋಕಾರ್ಪಣೆ ಮಾಡಿ, ಶೋಷಿತ ವರ್ಗ, ಸ್ಥಳೀಯ ರೋಗಿಗಳಿಗೆ, ಹಳ್ಳ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,022 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar