• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಫೆ. 03 ರಂದು ಬೃಹತ್ ಉದ್ಯೋಗ ಮೇಳ

January 27, 2018 by Gaju Gokarna Leave a Comment

ಹೊನ್ನಾವರ: ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ದೇಶದ ಪ್ರಧಾನ ಮಂತ್ರಿಗಳ ಹೊಸ ಕಲ್ಪನೆಯ ‘ಸ್ಕಿಲ್ ಇಂಡಿಯಾ’ ಧ್ಯೇಯ ವಾಕ್ಯದೊಂದಿಗೆ ಯುವ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯವನ್ನು ತೆರೆದು ಆ ಮೂಲಕ ಹೊಸ ಉದ್ಯೋಗವನ್ನು ಸೃಷ್ಟಿಸುವ ಕಾರ್ಯಕ್ಕೆ ಫೆ.3 ರಂದು ಪಟ್ಟಣದ ಎಸ್‍ಡಿಎಮ್ ಕಾಲೇಜ್‍ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಪಿ.ಕರ್ಕಿ ಮಾಹಿತಿ ನೀಡಿದರು.

ಪಟ್ಟಣದ ಎಸ್‍ಡಿಎಮ್ ಕಾಲೇಜ್‍ನ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಈ ದಿಸೆಯಲ್ಲಿ ಭಾರತ ಸರ್ಕಾರದ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವರರಾದ ಅನಂತಕುಮಾರ ಹೆಗಡೆಯವರ ಮುಂದಾಳತ್ವದಲ್ಲಿ ಈ ಬೃಹತ್ ಉದ್ಯೋಗ ಮೇಳ ನಡೆಯಲಿದೆ.
ಭಾರತ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯದ Skill India, NSDC, Dhatri, RIIIT  ಹಾಗೂ SDM ಕಾಲೇಜ್ ಹೊನ್ನಾವರ ಇವರ ಸಹಯೋಗದೊಂದಿಗೆ ಫೆ. 03 ರಂದು ಶನಿವಾರ ಹೊನ್ನಾವರದ SDM ಕಾಲೇಜ್ ಆವರಣದಲ್ಲಿ ಬೆಳಿಗ್ಗೆ 9.30 ರಿಂದ ಉದ್ಯೋಗಮೇಳ ನಡೆಯಲಿದೆ. ಈ ಉದ್ಯೋಗಮೇಳದಲ್ಲಿ 40 ಕ್ಕೂ ಅಧಿಕ ಪ್ರತಿಷ್ಟಿತ ಕಂಪನಿಗಳು ಭಾಗವಹಿಸಲಿದೆ. ಪ್ರಮುಖವಾಗಿ Housejoy, BP, FLO, Swiggy, Runner,Duster, KSSA ಮುಂತಾದ ಕಂಪನಿಗಳು ಭಾಗವಹಿಸಲಿವೆ.
ITI, Polytechnic, Diploma, BE, MCA, Bcom & Engineering ಪದವೀಧರರ ಜೊತೆಗೆ 5ನೇ ತರಗತಿ ಮೇಲ್ಪಟ್ಟವರು ಸಹ ಭಾಗವಹಿಸಬಹುದು.Security Guards, Delivery Boys, Plumbers, Beautition, Facility support staff, Engineer ಮುಂತಾದ ಹುದ್ದೆಗಳಿಗೆ ಅವಕಾಶವಿದ್ದು ಆಕಾಂಕ್ಷಿಗಳು ಭಾಗವಹಿಸಬಹುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಸರು ನೊಂದಾಯಿಸಿಕೊಳ್ಳಲು ಫೆ. 03 ರಂದು ಬೆಳಿಗ್ಗೆ ಕಾಲೇಜಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕೌಶಲ್ಯ ಭಾರತ’ ಯೋಜನೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಆಸಕ್ತ ಯುವಕ/ಯುವತಿಯರಿಗೆ ಕೌಶಲ್ಯ ತರಬೇತಿ ಹಾಗೂ ಅದಕ್ಕೆ ತಕ್ಕಂತೆ ಉದ್ಯೋಗವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಪ್ರಯತ್ನಗಳು ಪ್ರಾರಂಭಗೊಂಡಿದ್ದು, ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗಮೇಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಸ್‍ಡಿ ಎಮ್ ಪ್ರಾಚಾರ್ಯರಾದ ಎಸ್ ಎಸ್ ಹೆಗಡೆ ಮೊ. 9449148072, ಡಿ.ಎಲ್. ಹೆಬ್ಬಾರ ಮೊ. 9448435061, ಎಂ. ಆರ್. ನಾಯ್ಕ ಮೊ.9448906444, ಶಿವರಾಮ ಶಾಸ್ತ್ರಿ ಮೊ. 9483177050 ಇವರನ್ನು ಸಂಪರ್ಕಿಸಲು ಕೋರಿದೆ. ಕಾರ್ಯಕ್ರಮದಲ್ಲಿ 2 ಸಾವಿರ ಉದ್ಯೋಗಾಕಾಂಕ್ಷಿಗಳು ನಿರೀಕ್ಷೆ ಇದ್ದು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಎಸ್.ಎಸ್. ಹೆಗಡೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‍ಡಿಎಮ್ ಕಾಲೇಜಿನ ಆಡಳಿತ ಮಂಡಳಿಯ ಕೃಷ್ಣ ಮೂರ್ತಿ ಭಟ್, ಉಮೇಶ ನಾಯ್ಕ, ಉಪನ್ಯಾಸಕರಾದ ಡಿ.ಎಲ್. ಹೆಬ್ಬಾರ, ಎಂ.ಆರ್. ನಾಯ್ಕ, ವಿದ್ಯಾರ್ಥಿ ಪ್ರತಿನಿಧಿ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು.

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: 2 ಸಾವಿರ ಉದ್ಯೋಗಾಕಾಂಕ್ಷಿಗಳು, 9449148072, Bcom & Engineering, Be, Beautition, BP, Delivery Boys, Dhatri, Diploma, Duster, Engineer, Facility support staff, FLO, Housejoy, ITI, KSSA, MCA, NSDC, Plumbers, Polytechnic, RIIIT, Runner, sdm, Security Guards, Skill India, Swiggy, ಅನಂತಕುಮಾರ ಹೆಗಡೆ, ಉದ್ಯಮಶೀಲತಾ, ಎಸ್ ಎಸ್ ಹೆಗಡೆ ಮೊ, ಕಾಲೇಜ್, ಕೌಶಲ್ಯಾಭಿವೃದ್ದಿ, ಡಾ. ಎಂ.ಪಿ.ಕರ್ಕಿ, ನಿರುದ್ಯೋಗ ಸಮಸ್ಯೆ, ಪ್ರಧಾನ ಮಂತ್ರಿಗಳ, ಫೆ. 03, ಬೃಹತ್ ಉದ್ಯೋಗ ಮೇಳ, ರಂದು, ಸ್ಕಿಲ್ ಇಂಡಿಯಾ' ಧ್ಯೇಯ ವಾಕ್ಯ, ಹೊಸ ಕಲ್ಪನೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar