ಹೊನ್ನಾವರ ,
ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಪ್ರಕಾಶ ಯುವಕ ಸಂಘ ಮುಗ್ವಾ (ರಿ.) ಇವರ ಸಹಭಾಗಿತ್ವದಲ್ಲಿ ಪ್ರತಿಬೋಧಯದಲ್ಲಿ ಕೌಶಲ್ಯ ಅಭಿವೃದ್ಧಿ ತರಭೇತಿ 2017-18 ರ ತರಭೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಗೇಬ್ರಿಯಲ್ ಲೋಪಿಸ್ ನಿರ್ದೇಶಕರು ಪ್ರತಿಭೋದಯರವರು ಮಾತನಾಡಿ ಈ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ ಎಂದು ಹೇಳಿದರು.
ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ವಿನಾಯಕ ನಾಯ್ಕ ಮೂಡ್ಕಣಿ ಅಧ್ಯಕ್ಷರು ತಾಲೂಕು ಯುವ ಒಕ್ಕೂಟ ಹೊನ್ನಾವರ ಮಾತನಾಡಿ ಕೇಂದ್ರ ಸರ್ಕಾರವು ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ವಿವಿಧ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ನೀಡುತ್ತಿರುವುದು ಶ್ಲಾಘನೀಯ.
ತರಬೇತಿ ಪಡೆದ ಫಲಾನುಭವಿಗಳು ಸಂಪೂರ್ಣವಾಗಿ ಇದರ ಪ್ರಯೋಜನ ಪಡೆದುಕೊಂಡು ನಿರುದ್ಯೋಗ ನಿವಾರಿಸಲು ದಿಟ್ಟ ಹೆಜ್ಜೆ ಇಡಿ ಎಂದು ಹೇಳಿದರು.
ನೆಹರು ಯುವ ಕೇಂದ್ರದ ಮೀರಾ ನಾಯಕ್ ಪ್ರಾಸ್ತಾವಿಕ ಮಾತನಾಡಿ ನೆಹರು ಯುವ ಕೇಂದ್ರದಿಂದ ತರಬೇತಿ ಪಡೆದ ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ತರಬೇತಿಯ ಉದ್ದೇಶವನ್ನು ವಿಸ್ತಾರವಾಗಿ ತಿಳಿಸಿದರು.
ವೇದಿಕೆಯಲ್ಲಿ ಸಿರಿಲ್ ಮಿರಂಡಾ ಪ್ರಾಂಶುಪಾಲರು ಪ್ರತಿಬೋದಯ ಹೊನ್ನಾವರ, ಶಿಕ್ಷಕಿ ತಾರಾ ನಾಯ್ಕ ಉಪಸ್ಥಿತರಿದ್ದರು.
Leave a Comment