ಹೊನ್ನಾವರ : ಯಕ್ಷಗಾನ ಕಲಾವಿಧರೆಲ್ಲರೂ ಒಂದೇ ಕಲಾ ಕುಟುಂಬದ ಸದಸ್ಯರು. ಕಲಾವಿಧರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ಸರಳ ಸಜ್ಜನರು ಹಾಗೂ ವೈದ್ಯರು ಆಶಿಕ್ಕುಮಾರ್ ಹೆಗಡೆಯವರು. ವೃತ್ತಿಯಿಂದ ವೈದ್ಯರಾದರೂ, ಇವರಿಗೆ ಯಕ್ಷಗಾನ ಕಲಾವಿಧರ ಮೇಲೆ ಅಪಾರ ಪ್ರೀತಿ. ತಾಲೂಕಿನ ಸೇಂಟ್ ಇಗ್ನೇಸಿಯಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಆಶಿಕ್ ಹೆಗಡೆಯವರು ಕರ್ಕಿಯ ಖ್ಯಾತ ಮದ್ದಳೆ ವಾದಕ ಪ್ರಭಾಕರ ಭಂಡಾರಿಯವರ ಮಗ ಮಂಜುನಾಥ ಭಂಡಾರಿಯವರು ಕಳೆದ ಹಲವು ದಿನಗಳಿಂದ ಕೈ ನರ ದೌರ್ಬಲ್ಯ ಸಮಸ್ಯೆಯ ಅನಾರೊಗ್ಯದಿಂದ ಬಳಲುತ್ತಿದ್ದರು. ಇವರ ಕಲೆಗೆ ಪ್ರೋತ್ಸಾಹಿಸಿ ಯಕ್ಷ ಬಳಗ ಹೊನ್ನಾವರ ಇವರ ಸಹಕಾರದೊಂದಿಗೆ ಅವರಿಗೆ ಸಹಾಯಾರ್ಥವಾಗಿ 60.000 ರೂ (ಆರವತ್ತು ಸಾವಿರ) ಚೆಕ್ ನೀಡಿದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲ್ಕೋಡ್ ಉಪಸ್ಥಿತರಿದ್ದರು.
Leave a Comment