ಹಳಿಯಾಳ:- ಹಳಿಯಾಳ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಶಾಸಕ ಆರ್.ವಿ.ದೇಶಪಾಂಡೆಯವರ ಮನೆಯಲ್ಲಿ ನಾಯಿಯೊಂದಿದೆ ಅದು ಸದ್ಯ ಆರ್.ವಿ.ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆಗಿದ್ದು ಅದು ಇದು ಶಾಸಕರ ಕಿರಿಯ ಪುತ್ರ ಪ್ರಶಾಂತ ದೇಶಪಾಂಡೆ ಅವರ ಅಚ್ಚುಮೆಚ್ಚಿನ ನಾಯಿ ಮರಿ. ಇದೆಲ್ಲ ಕೇಳಿದ ತಾವು ಓಹ ಇದು ಲ್ಯಾಬ್, ಲೆಬ್ರಡಾರ್, ಬಾಕ್ಸರ್, ಪಮೇರಿಯನ್ ಇನ್ನಾವುದೊ ಉತ್ತಮ ತಳಿಯ ಅತಿ ದುಬಾರಿ ನಾಯಿ ಮರಿಯಿರಬೇಕು ಅಲ್ಲವೇ ಎಂದು ಊಹಿಸಿಕೊಳ್ಳಬಹುದು ಸಾರಿ ಸರ್ ನಿಮ್ಮ ಊಹೆ ಸಂಪೂರ್ಣ ತಪ್ಪು ಇದು ಬಿದಿನಾಯಿ ಮರಿ ಆದರೇ ಇದು ಪ್ರಶಾಂತ ಅವರಿಗೆ ಅಚ್ಚುಮೆಚ್ಚು ಆ ನಾಯಿಮರಿಯ ಹೆಸರು “ಲಕ್ಕಿ” ಈ ಲಕ್ಕಿಯ ಒಂದು ಚಿಕ್ಕ ಸ್ಟೋರಿ ಹೇಳ್ತೆವೆ ಕೇಳಿ. ಈಗ ತಾನೆ ಮುಗಿದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಜೋಯಿಡಾ ತಾಲೂಕಿನಲ್ಲಿ ಪ್ರಚಾರ ಕಾರ್ಯ ಮುಗಿಸಿ ತಮ್ಮ ಕಾರಿನಲ್ಲಿ ಹಳಿಯಾಳಕ್ಕೆ ಹಿಂದಿರುಗುತ್ತಿದ್ದ ಪ್ರಶಾಂತ ಅವರ ಕಾರಿನ ಎದುರು ಒಮ್ಮೆಲೆ ಬಂದ ಸುಮಾರು ಒಂದೂವರೆ ತಿಂಗಳ ವಯಸ್ಸಿನ ಪುಟ್ಟ ನಾಯಿ ಮರಿಯನ್ನು ಕಂಡ ಪ್ರಶಾಂತ ತಕ್ಷಣ ಕಾರನ್ನು ನಿಲ್ಲಿಸಿ ಅದರ ಬಳಿ ತೆರಳಿ ಅದನ್ನು ನೋಡಿ ಅದರಿಂದ ಆಕರ್ಷಿತರಾಗಿ ಇದನ್ನು ಮನೆಗೆ ತೆಗೆದುಕೊಂಡು ಹೋಗಿ ಸಾಕೊಣ ಎಂದು ತಿರ್ಮಾನಿಸಿ ಅದನ್ನು ಮನೆಗೆ ತಂದು ವೈದ್ಯರನ್ನು ಮನೆಗೆ ಕರೆಸಿ ಉಪಚರಿಸಿ ಬಳಿಕ ಅದಕ್ಕೆ “ಲಕ್ಕಿ” ಎಂದು ನಾಮಕರಣ ಮಾಡಿದ್ದು ಆಯಿತು. ಮನೆಯಲ್ಲಿರುವ ಕೆಲಸಗಾರರಿಗೆ ನಾಯಿಯ ಬಗ್ಗೆ ಅತಿವ ಕಾಳಜಿ ವಹಿಸುವಂತೆ ಸೂಚಿಸಿರುವ ಪ್ರಶಾಂತ ಅವರು ಕಾಲಕಾಲಕ್ಕೆ ಅದಕ್ಕೆ ಉಪಹಾರ ನೀಡುವಂತೆ ಹಾಗೂ ಸಂಪೂರ್ಣ ಕಾಳಜಿ ವಹಿಸುವಂತೆ ಸೂಚಿಸಿದ್ದು ಈ ನಾಯಿ ಮರಿ ಸಚಿವ ದೇಶಪಾಂಡೆ ಗೆಲುವಿಗೂ ಲಕ್ಕಿ ಆಯಿತೇ ಎಂದು ಅವರ ಕುಟುಂಬಸ್ಥರು ಹಾಗೂ ಅವರಲ್ಲಿಯ ಕೆಲಸಗಾರರು ಅಂದುಕೊಳ್ಳುತ್ತಿದ್ದು ಬಿದಿಯಲ್ಲಿ ಬಿದ್ದು ಬಿದಿನಾಯಿಯಾಗುತ್ತಿದ್ದ ಮರಿಯನ್ನು ಮನೆಗೆ ತಂದು ಮಾನವೀಯತೆ ಮೆರೆದ ಪ್ರಶಾಂತ ದೇಶಪಾಂಡೆ ಅವರ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Leave a Comment