• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ;ಶಾಸಕ ಸುನಿಲ್ ನಾಯ್ಕ

May 25, 2018 by Gaju Gokarna Leave a Comment

ಹೊನ್ನಾವರ;

ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹೊನ್ನಾವರ ,ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸುನೀಲ ನಾಯ್ಕ ಅವರಿಗೆ ಹೊನ್ನಾವರ ತಾಲೂಕಿನ ಮಾಗೋಡ್, ನಗರಬಸ್ತಿಕೇರಿ ಹಾಗೂ ಕುದ್ರಗಿಯಲ್ಲಿ ಗೌರವಪೂರ್ವಕ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಮಾಗೋಡ ಸನ್ಮಾನ ಸ್ವೀಕರಿಸಿದ ಬಳಿಕ ನಗರಬಸ್ತಿಕೇರಿಯ ಸೀಮಾ ಮುಖ್ಯಪ್ರಾಣ ದೇವಲಾಯಕ್ಕೆ ಆಗಮಿಸಿದ ಶಾಸಕ ಸುನೀಲ ನಾಯ್ಕ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಳ್ಕೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಕೇಶವ ನಾಯ್ಕ ಮಾತನಾಡಿ ಭಟ್ಕಳ ಕ್ಷೇತ್ರದಲ್ಲಿ ಹೆಮ್ಮೆಯ ಶಾಸಕರಾದ ದಿವಂಗತ ಚಿತ್ತರಂಜನ ನೆನಪನ್ನು ಮಾಡುವ ನಿಟ್ಟಿನಲ್ಲಿ  ಯುವಕರೆಲ್ಲರೂ ಸೇರಿ ಒಗ್ಗಟ್ಟಾಗಿ ಈ ಬಾರಿ ಸುನೀಲ ನಾಯ್ಕರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಮತಗಳನ್ನು ನೀಡಿ ಅಭೂತಪೂರ್ಣವಾದ ಗೆಲುವನ್ನು ನೀಡಿದ್ದಾರೆ. ನಮ್ಮ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಹೆಚ್ಚಿನ ಮತಗಳನ್ನು ಸುನೀಲ ನಾಯ್ಕರಿಗೆ ನೀಡಲಾಗಿದೆ. ಅಷ್ಟೆ ಅಲ್ಲದೆ ನಾವೆಲ್ಲರು ಸೇರಿ ಇಂದು ಸನ್ಮಾನ ಮಾಡಿದ್ದೇವೆ ಸನ್ಮಾನ ಎಂದರೆ ಅವರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಹೊರೆಸಿದಂತೆ . ನಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಮುಂದಿನ ದಿನದಲ್ಲಿ ದೂರವಾಗುವಂತ ಪ್ರಯತ್ನ ಶಾಸಕರು ನಡೆಸಲಿ ಎಂದರು.ದೇವಾಲಯದ ಅರ್ಚಕರಾದ ಸುರಾಲು ಚಂದ್ರಶೇಖರ ಭಟ್ಟ ಮಾತನಾಡಿ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ  ದ್ವಿಗಿಜಯ ಸಾಧಿಸುವ ಮೂಲಕ ಶಾಸಕರಾಗಿದ್ದಾರೆ ಕ್ಷೇತ್ರದಲ್ಲಿ ವಿವಿಧ ಸಮಸ್ಯೆಗಳಿವೆ ಅವೆಲ್ಲ ಮುಂದಿನ ದಿನದಲ್ಲಿ ಬಗೆಹರಿಯುವಂತಾಗಲಿ ಎಂದು ಶುಭ ಹಾರೈಸಿದರು.            ನಗರ ಬಸ್ತಿಕೇರಿ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಶಾಸ್ತ್ರಿ ಮಾತನಾಡಿ  ನಗರಬಸ್ತಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ  ತಿಳಿಸಿ ಮುಂದಿನ ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಮಾದರಿ ಗ್ರಾಮ ಪಂಚಾಯತನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡರು. ಸನ್ಮಾನ ಸ್ವೀಕರಿಸಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಗೆಲುವು ನಿಮ್ಮೆಲ್ಲರ ಗೆಲುವು.ಈ ಬಾರಿ ಚುನಾವಣೆಯಲ್ಲಿ ನಗರಬಸ್ತಿಕೇರಿ ಅತಿಹೆಚ್ಚು ಮತ ನೀಡಿದ ಗ್ರಾಮ ಪಂಚಾಯತ್ ಆಗಿದೆ. ಹೊನ್ನಾವರ ತಾಲೂಕು ನನ್ನ ಗೆಲುವಿಗೆ ಮುಖ್ಯವಾದ ಪಾತ್ರ ವಹಿಸುತ್ತದೆ. ಈ ಚುನಾವಣೆ ಕಾಂಗ್ರೆಸ್-ಬಿಜೆಪಿ ಮದ್ಯೆ ಇರದೇ ದೌರ್ಜನ್ಯ, ಅವ್ಯವಹಾರ, ಧರ್ಮ-ಅಧರ್ಮ ಹಾಗೂ ಹಣ ಬಲದ ವಿರುದ್ದ ನಡೆದಿತ್ತು ಅದರಲ್ಲಿ ನಾನು ಗೆಲುವು ಸಾಧಿಸಿದ್ದೆನೆ.ನಾನು ಶಾಸಕನಾಗಿ ಆಯ್ಕೆಯಾಗಿದ್ದು ನೀವು ನೀಡಿದ ಭಿಕ್ಷೆಯಿಂದ ಎಂದರು. ಈ ಶರಾವತಿ ಹೊಳೆಸಾಲು ಭಾಗದಲ್ಲಿ ಅಭೂತ ಪೂರ್ವ ಯಶಸ್ಸು ನನ್ನ ಪಾಲಿಗೆ ಇದೆ ಎಂದು ಚುನಾವಣೆಯಲ್ಲಿ ಸಾಬಿತಾಗಿದೆÉ. ನೀವು ನೀಡಿದ ಪ್ರತಿ ಮತಕ್ಕೂ ಋಣ ತೀರಿಸುವ ಕೆಲಸ ಮುಂದಿನ ದಿನದಲ್ಲಿ ಮಾಡುತ್ತೇನೆ ಎಂದರು.     ವೇದಿಕೆಯಲ್ಲಿ ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ,  ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಶಂಭು ಬೈಲಾರ, ತಾಲೂಕ ಪಂಚಾಯತ ಮಾಜಿ ಸದಸ್ಯೆ ಜಯಂತಿ ನಾಯ್ಕ, ಬಿ.ಟಿ ಗಣಪತಿ ನಾಯ್ಕ, ಸೇರಿದಂತೆ ಪ್ರಮುಖರು ಉಪಸ್ದಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಅಧರ್ಮ, ಅವ್ಯವಹಾರ, ಕುದ್ರಗಿ, ಚಿತ್ತರಂಜನ, ಜಿಲ್ಲಾ ಪಂಚಾಯತ ವ್ಯಾಪ್ತಿ, ದೌರ್ಜನ್ಯ, ಧರ್ಮ, ನಗರಬಸ್ತಿಕೇರಿ, ನೀವು ನೀಡಿದ, ಭಟ್ಕಳ ಹೊನ್ನಾವರ ಕ್ಷೇತ್ರ, ಭಿಕ್ಷೆಯಿಂದ, ಮಾಗೋಡ್, ವಿಶೇಷ ಪೂಜೆ, ಶಾಸಕ ಸುನಿಲ್ ನಾಯ್ಕ, ಶಾಸಕನಾಗಿ ಆಯ್ಕೆಯಾಗಿದ್ದು, ಹಣ ಬಲ, ಹೊನ್ನಾವರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar