ಹೊನ್ನಾವರ: ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಎಂಎಫ್ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.11500 ದಂಡ ವಿಧಿಸಿದೆ.
ನ್ಯಾಯಾಧೀಶ ಮಧುಕರ ಪಿ.ಭಾಗ್ವತ ಅವರು ಆದೇಶ ನೀಡಿದ್ದಾರೆ. ಮಂಕಿ ಗ್ರಾಮದ ಗೋವಿಂದ ಗಣಪತಿ ನಾಯ್ಕ, ಸುಬ್ರಾಯ ಬಾಬು ನಾಯ್ಕ ಹಾಗೂ ತಿಮ್ಮಪ್ಪ, ಗಣಪತಿ ನಾಯ್ಕ ಶಿಕ್ಷೆಗೊಳಗಾದ ಆರೋಪಿಗಳು. 3 ವರ್ಷದ ಹಿಂದೆ ಅದೇ ಗ್ರಾಮದ ರಾಜು ಮಂಜುನಾಥ ನಾಯ್ಕ ಎಂಬುವವರ ಭುಜಕ್ಕೆ ಕಬ್ಬಿಣದ ಪೈಪ್ ತುಂಡಿನಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ ನಾಯರಿ ಕೆ. ಅವರು ವಾದ ಮಂಡಿಸಿದ್ದರು. ಮಂಕಿ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ನಿತ್ಯಾನಂದ ಪಂಡಿತ್ ಹಾಗೂ ಕೆ.ಎಸ್.ಸುಂಕದ್ ಅವರು ಆರೋಪಿಗಳ ವಿರುದ್ಧ ನ್ಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.
Leave a Comment