• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳ್ಳಿಗಳ ನೈಜ ಚಿತ್ರಣವನ್ನು ಭಟ್ಕಳ ಹೊನ್ನಾವರ ಶಾಸಕರಿಂದ ಗ್ರಾಮ ವಾಸ್ತವ್ಯ. ಅಧಿಕಾರಿಗಳೊಂದಿಗೆ ತೆರಳಿ ಸ್ಧಳದಲ್ಲಿಯೇ ಕೆಲವು ಸಮಸ್ಯೆಗಳ ಪರಿಹಾರ . ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ

August 5, 2018 by Gaju Gokarna Leave a Comment

ಹೊನ್ನಾವರ ;

ಭಟ್ಟಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ” ಹಳ್ಳಿ ವಾಸ್ತವ್ಯ ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ಹೊನ್ನಾವರ ತಾಲೂಕಿನ ಅತ್ಯಂತ ಕುಗ್ರಾಮವಾದ ನಗರ ಬಸ್ತಿಕೇರಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಹಾಡಗೇರಿ ಗ್ರಾಮಕ್ಕೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಅಲ್ಲಿಯ ಮೂಲಭೂತ ಸೌಲಭ್ಯಗಳ,ಕುಂದು ಕೊರತೆಗಳ ಜ್ವಲಂತ ಸಮಸ್ಯೆಗಳ ನೈಜ ಚಿತ್ರಣ ಅರಿಯುವ ಸಲುವಾಗಿ ಅಲ್ಲಿನ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಅಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕಾರ್ಯ ನಿರ್ವಹಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಹೀಗೆ ವಿವಿಧ ಇಲಾಖಾ ಅಧಿಕಾರಿಗಳನ್ನು ಜನರ ಸಮೀಪ ಕರೆತಂದು ಅಲ್ಲಿನ ಜನರು ಯಾವ ಮಟ್ಟಿಗೆ ಮೂಲಭೂತ ಸೌಕರ್ಯ ವಂಚಿತರಾಗಿದ್ದಾರೆ ಏಂಬುವುದನ್ನು ಮನವರಿಕೆ ಮಾಡಿ ಅದರ ಪರಿಹಾರಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಏಂಬುವುದನ್ನು ಜನರೊಂದಿಗೆ ಸಂವಾದ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ರೂಪು ರೇಷೆ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಹಾಡಗೇರಿಯಲ್ಲಿ ನಡೆದ ಹಳ್ಳಿ ವಾಸ್ತವ್ಯ ಸಭೆಯನ್ನುದ್ದೇಶಿಸಿ ಶಾಸಕ ಸುನಿಲ್ ನಾಯ್ಕ ಮಾತನಾಡಿ ನಿಮ್ಮ ಗ್ರಾಮದಲ್ಲಿ ವಾತ್ಸವ್ಯ ಮಾಡಲೂ ಬಂದಿದ್ದು ಪ್ರವಾಸಕ್ಕಲ್ಲ ನಿಮೂರಿನ ನೈಜ್ಯ ಪರಿಸ್ಥಿತಿಯನ್ನು ಅರಿತು, ಅದಕ್ಕೆ ಪರಿಹಾರವನ್ನು ನೀಡುವ ಸಲೂವಾಗಿ ಇಲ್ಲಿಗೆ ಬಂದಿದ್ದೇನೆ ಕೇವಲ ನಾನು ತಾನು ಮಾತ್ರವಲ್ಲ ವಿವಿಧ ಇಲಾಖೆಯ ಅಧಿಕಾರಿಗಳು ನಿಮ್ಮ ಉರಿಗೆ ಭೇಟಿ ನೀಡಿದ್ದಾರೆ. ಇದರ ಅರ್ಥ ಆದಷ್ಟು ಸಮಸ್ಯೆ ಇಲ್ಲೆ ಪರಿಹಾರವಾಗಬೇಕು ಎನ್ನುವ ಸಲೂವಾಗಿ ಇದರ ಸದುಪಯೋಗ ಪಡೆದುಕೋಳ್ಳಿ ಎಂದರು.
ನಂತರ ವಿವಿದ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿರುವ ಅನುದಾನ ಹಾಗೂ ಸೌಲಬ್ಯದ ಬಗ್ಗೆ ತಿಳಿಸಿ ಇದರ ಪ್ರಯೋಜನ ಪಡೆದುಕೋಳ್ಳಿ ಎಂzರು. ಗ್ರಾಮಸ್ಥರು ಅಧಿಕಾರಿಗಳಿಗೆ ವಿವಿಧ ರೀತಿಯಲ್ಲಿ ಪ್ರಶ್ನಿಸಿ ತಮ್ಮ ಗ್ರಾಮಾಭಿವೃದ್ದಿಯಾಗಲು ಯಾವ ಯಾವ ರೀತಿಯ ಯೊಜನೆಗಳಿವೆ ಎಂದರು. ಇನ್ನು ಕೆಲವರು ತಮ್ಮ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಯು ಭೇಟಿ ನೀಡಿ ಸಮಸ್ಯೆ ಆಲಿಸುವುದಿಲ್ಲ,ನಾವು ಸರ್ಕಾರಿ ಕಚೇರಿಗೆ ಅಲೆಯೊದೆ ಆಗ್ಬಿಟ್ಟಿದೆ ವಿನಃ ಯಾವುದೇ ಕೆಲಸವಾಗುತ್ತಿಲ್ಲ. ಸ್ಥಳಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಯೋಜನೆಗಳ ಬಗ್ಗೆ ತಿಳಿಸುತ್ತಿಲ್ಲ.ಸರ್ಕಾರದಿಂದ ಜಾರಿಯಾಗುವ ಯೋಜನೆಗಳು,ಅನುದಾನಗಳಿಂದ ವಂಚಿತವಾಗಿದ್ದೇವೆ ಎಂದು ಅಧಿಕಾರಿಗಳ ಮೇಲೆ ಕೋಪಗೊಂಡು ಶಾಸಕರ ಬಳಿ ತಮ್ಮ ಅಳಲು ತೊಡಿಕೊಂಡರು. ಅಲ್ಲದೇ ಹಾಡಗೇರಿ ಶಾಲಾ ವಿದ್ಯಾರ್ಥಿಗಳು ಸಹ ತಮ್ಮ ಶಾಲೆಗೆ ಸುಕ್ತ ಆಟದ ಮೈದಾನ,ಬಿಸಿಯೂಟದ ಆಹಾರ ದಾಸ್ತಾನು ಕೊಠಡಿ, ಖಾಯಂ ಶಿಕ್ಷಕರ ನೇಮಕ ಸೇರಿದಂತೆ ಭೌತಿಕ ಸೌಲಭ್ಯಗಳ ಕೊರತೆ ಇರುವ ಕುರಿತು ಶಾಸಕರಿಗೆ ಮನವಿ ಸಲ್ಲಿಸಿ ಶಾಸಕರ ಗಮನ ಸೆಳೆದರು.
ಹಳ್ಳಿ ವಾಸ್ತವ್ಯಕ್ಕಾಗಿ ಶಾಸಕರು ಕೃಷ್ಣ ಮರಾಠಿ ಎಂಬ ಬಡಕುಟುಂಬದಲ್ಲಿ ವಾಸ್ಥವ್ಯ ಹೂಡಿದರು.ಮನೆಯ ಮಾಲಿಕರಾದ ಕೃಷ್ಣ ಮರಾಠಿ ಮಾತನಾಡಿ ಈ ಹಿಂದಿನ ಶಾಸಕರಲ್ಲಿ ನಮ್ಮ ಹಾಡಗೇರಿ ಶಾಲೆಯಲ್ಲಿ ಖಾಯಂ ಶಿಕ್ಷಕರ ನೇಮಕ ಕುರಿತು ಅವರ ಮನೆಗೆ ಹೋಗಿದ್ದೆವು ಅವರಿಂದ ಯಾವುದೆ ಪ್ರಯೋಜನವಾಗಿಲ್ಲಾ ಆದರೆ ಸುನೀಲ್ ನಾಯ್ಕರು ಪ್ರಚಾರದ ಸಂರ್ಬದಲ್ಲಿ ಇಲ್ಲಿಗೆ ಬಂದಾಗ ಅವರ ಬಳಿ ವಿಷಯ ಪ್ರಸ್ತಾಪಿಸಿದಾಗ ನಾನು ಶಾಸಕನಾಗಲಿ ಆಗದೆ ಇರಲಿ ಆದರೆ ನಿಮ್ಮ ಶಾಲೆಗೆ ಶಿಕ್ಷರ ಒದಗಿಸುವ ಭರವಸೆ ನೀಡಿದ್ದರು, ಅವರು ಕೊಟ್ಟ ಮಾತಿನಂತೆ ಕೆಲವು ದಿನದ ಹಿಂದೆ ನಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸಿದ್ದಾರೆ ಇಂತಹ ಒರ್ವ ಶಾಸಕರು ನಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿರುವುದು ತುಂಭಾ ಸಂತೋµ ತಂದಿದೆÉ ಎಂದರು.
ಶಾಸಕ ಸುನಿಲ್ ಕೃಷ್ಣ ಮರಾಠಿಯವರ ಕುಟುಂಬಸ್ಥರು ಬೇಯಿಸಿದ ಅಡುಗೆಯನ್ನೆ ಉಟಮಾಡಿ,ತದ ನಂತರ ಕುಟುಂಬಸ್ಥರು ಹಾಗೂ ಶಾಸಕರ ಭೇಟಿ ಮಾಡಲು ಬಂದ ಜನರೊಂದಿಗೆ ಕೆಲಕಾಲ ಚರ್ಚಿಸಿದರು. ರಾತ್ರಿ ವಾಸ್ತವ್ಯದ ನಂತರ ಬೆಳಿಗ್ಗೆ ಎದ್ದು 2 ಕಿಲೋ ಮಿಟರ್ ಪಾದಯಾತ್ರೆಯ ಮೂಲಕ ಕೃಮಿಸಿ ಹರಿಜನ ಸಮುದಾಯದ ಮನೆಗಳಿಗೆ ಭೇಟಿ ನೀಡಿದರು. ಅವರು ನೀಡಿದ ಉಪಹಾರ ಸೇವಿಸಿ ಅಲ್ಲಿಯ ಜನರ ಸಮಸ್ಯೆಗಳ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನಿಡಿದರು.
ಈ ಸಂಧರ್ಬದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದÀ ಶಾಸಕ ಸುನೀಲ್ ನಾಯ್ಕ ಹಳ್ಳಿ ವಾತ್ಸವ್ಯ ನಮ್ಮ ಕ್ಷೇತ್ರದ ವಿನೂತನ ಕಾರ್ಯಕ್ರಮ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಉದ್ದೆಶದಿಂದ ನಮ್ಮ ಕ್ಷೇತ್ರದ ಕುಗ್ರಾಮವಾಗಿರುವ ಹಾಡಗೇರಿಯಲ್ಲೀ ಅಧಿಕಾರಿಗಳ ಜೋತೆ ಭೇಟಿ ನೀಡಿದ್ದೇನೆ.ಇಲ್ಲಿಯ ಜನತೆಯ ಕಷ್ಟಗಳಿಗೆ ಯಾವರೀತಿ ಸ್ಪಂದಿಸ ಬೇಕು ಎನ್ನುವ ಸಲೂವಾಗಿ ವಾಸ್ತವ್ಯ ಹೂಡಿದ್ದೆನೆ ಎಂದರು. ಇಲ್ಲಿಯ ಜನತೆ ಅನೇಕ ರೀತಿಯಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಅವರಿಗೆ ಯಾವರೀತಿ ನೆರವಾಗುತ್ತಿರಿ ಎಂದು ಪ್ರಶ್ನಿಸಿದಾಗ ಉತ್ತರಿಸಿ ಈ ಗ್ರಾಮದ ಜನರು ಮೂಲಭೂತ ಸೌಕರ್ಯ ವಂಚಿತರಾಗಿ ಯಾವ ರೀತಿ ಜಿವನವನ್ನು ಸಾಗಿಸುತ್ತಿದ್ದಾರೆ ಎನ್ನುವುದನ್ನು ಅರಿತಿದ್ದೇನೆ. ಅದಕ್ಕೊಂದು ಸಂಪೂರ್ಣ ಪರಿಹಾರ ಕೋಡುವ ದೃಷ್ಠಿಯಿಂದ ಈ ಗ್ರಾಮವನ್ನು ಪ್ರಥಮವಾಗಿ ಆಯ್ಕೆ ಮಾಡಿಕೋಂಡಿದ್ದೆನೆ ಮುಂದಿನ ದಿನಗಳಲ್ಲಿ ಯಾವರೀತಿ ಪರಿಹಾರ ಒದಗಿಸಿಕೋಡಬೇಕು ಎನ್ನವುದನ್ನು ಸರ್ಕಾರದ ಮಟ್ಟದಲ್ಲಿ ಹೋರಾಡಿ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು, ಈ ಗ್ರಾಮದ ಶಾಲೆಗೆ ಕಳೆದ ಮೂರು ವರ್ಷಗಳಿಂದ ಶಿಕ್ಷಕರೆ ಇಲ್ಲವಾಗಿತ್ತು ನಾನು ಶಾಸಕನಾಗಿ ಒಂದೆ ತಿಂಗಳಲ್ಲೆ ಹೋರಾಟ ಮಾಡಿ ಈ ಶಾಲೆಗೆ ಶಿಕ್ಷಕರನ್ನು ನೇಮಿಸಿದ್ದೆನ್ನೆ ನಿಮಗೆ ಈ ಗ್ರಾಮ ವಾತ್ಸವ್ಯ ಅನುಭವದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿÀ ನಾನು ಶಾಸಕನಾಗಿ ಆಯ್ಕೆ ಯಾಗಿ ವಿಧಾನ ಸಭೆಗೆ ಪ್ರವೇಶಿಸಿದ ಸಂತೋಷ ಈ ಹಳ್ಳಿ ವಾಸ್ತವ್ಯ ಮುಗಿಸಿದ ದಿನ ಮರುಕಳಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಬಿ ಜೆ ಪಿ ತಾಲೂಕಾದ್ಯಕ್ಷ ಸುಬ್ರಾಯ ನಾಯ್ಕ, ಉಪಾದ್ಯಕ್ಷ ಗಣಪತಿ ನಾಯ್ಕ ಬಿ ಟಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಕೇಶವ ನಾಯ್ಕ ಬಳ್ಕೂರ, ಶ್ರೀಧರ ನಾಯ್ಕ ಮಂಕಿ, ರಮೇಶ ತುಂಬೋಳ್ಳಿ, ಹನಮಂತ ಶೆಟ್ಟಿ ಮತ್ತಿತರರು ಶಾಸಕರ ಗ್ರಾಮ ವಾತ್ಸವ್ಯಕ್ಕೆ ಸಾತ್ ನೀಡಿದರು.

 

ಗ್ರಾಮ ವಾಸ್ತವ್ಯ watermarked DSC00031 watermarked DSC00019 watermarked DSC00077

 

 

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Trending Tagged With: 2 ಕಿಲೋ ಮಿಟರ್ ಪಾದಯಾತ್ರೆ, ಅಧಿಕಾರಿಗಳ ಮೇಲೆ ಕೋಪಗೊಂಡು ಶಾಸಕರ ಬಳಿ ತಮ್ಮ ಅಳಲು, ಅಧಿಕಾರಿಗಳೊಂದಿಗೆ ತೆರಳಿ ಸ್ಧಳದಲ್ಲಿಯೇ ಕೆಲವು ಸಮಸ್ಯೆಗಳ ಪರಿಹಾರ, ಕುಗ್ರಾಮವಾದ ನಗರ ಬಸ್ತಿಕೇರಿ ಪಂಚಾಯತ್, ಕುಂದು ಕೊರತೆಗಳ ಜ್ವಲಂತ ಸಮಸ್ಯೆಗಳ ನೈಜ ಚಿತ್ರಣ, ಖಾಯಂ ಶಿಕ್ಷಕರ ನೇಮಕ, ಗ್ರಾಮದಲ್ಲಿ ವಾತ್ಸವ್ಯ ಮಾಡಲೂ ಬಂದಿದ್ದು ಪ್ರವಾಸಕ್ಕಲ್ಲ, ನಿಮೂರಿನ ನೈಜ್ಯ ಪರಿಸ್ಥಿತಿ, ನಿರ್ವಹಣಾಧಿಕಾರಿ, ಬಿಸಿಯೂಟದ ಆಹಾರ ದಾಸ್ತಾನು ಕೊಠಡಿ, ಭಟ್ಕಳ ಹೊನ್ನಾವರ ಶಾಸಕರಿಂದ ಗ್ರಾಮ ವಾಸ್ತವ್ಯ, ಭಟ್ಟಳ- ಹೊನ್ನಾವರ ವಿಧಾನಸಭಾ ಕ್ಷೇತ್ರ, ಮೂಲಭೂತ ಸೌಲಭ್ಯಗಳ, ವಿದ್ಯಾರ್ಥಿಗಳು ಸಹ ತಮ್ಮ ಶಾಲೆಗೆ ಸುಕ್ತ ಆಟದ ಮೈದಾನ, ಶಾಸಕ ಸುನಿಲ್ ನಾಯ್ಕ, ಶಾಸಕರ ಈ ಕಾರ್ಯಕ್ಕೆ, ಸಂಪೂರ್ಣ ಪರಿಹಾರ ಕೋಡುವ ದೃಷ್ಠಿ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕರ ಪ್ರಶಂಸೆ, ಹಳ್ಳಿ ವಾಸ್ತವ್ಯ, ಹಳ್ಳಿ ವಾಸ್ತವ್ಯಕ್ಕಾಗಿ ಶಾಸಕರು ಕೃಷ್ಣ ಮರಾಠಿ ಎಂಬ ಬಡಕುಟುಂಬ, ಹಳ್ಳಿಗಳ ನೈಜ ಚಿತ್ರಣ, ಹಾಡಗೇರಿ ಗ್ರಾಮ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...