9 ದಿನ ಪೂರೈಸಿದ ಕಬ್ಬು ಬೆಳೆಗಾರರ
ಹಳಿಯಾಳ: 2016-17ನೇ ಸಾಲಿನಲ್ಲಿ ನುರಸಿದ ಕಬ್ಬಿಗೆ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಎದುರು ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ದಿ.15 ಬುಧವಾರ 10ನೇ ದಿನಕ್ಕೆ ಕಾಲಿಡಲಿದೆ.
ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧಾರವಾಡ, ಕಿತ್ತೂರು, ಮುಂಡಗೋಡ, ಹುಬ್ಬಳ್ಳಿ, ಕಲಘಟಗಿ, ಹಳಿಯಾಳ ಹಾಗೂ ಅಳ್ನಾವರ ಭಾಗದ ರೈತರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ ಮಂಗಳವಾರ 9 ದಿನ ಪೂರೈಸಿದೆ.
ಹಳಿಯಾಳ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದರು ಕೂಡ ಇದ್ಯಾವುದನ್ನು ಲೆಕ್ಕಿಸದೆ ರೈತರು ತಮ್ಮ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ 9 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರು ಕೂಡ ಸ್ಥಳಕ್ಕೆ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುವ ಸೌಜನ್ಯ ತೋರಿಲ್ಲ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ರೈತರಿಗೆ ಬಾಕಿ ಹಣ ನೀಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ, ಬಿ.ಡಿ ಚೌಗಲೆ,ಯು.ಕೆ ಬೊಬಾಟೆ, ಜಿ.ಆರ್ ಪಾಟೀಲ್, ಎಸ್ ಎಲ್ ಬನವಣ್ಣವರ, ಅಶೋಕ ಮೇಟಿ, ಗಿರೀಶ ಟೋಸೂರ, ಮಲ್ಲಾರಿ ಘಾಡಿ, ಸಂಜು ಪವಾರ, ನಾರಾಯಣ ಬೋಬಾಟಿ, ಶಿವಪುತ್ರ ನುಚ್ಚಂಬ್ಲಿ, ಜೀವಪ್ಪ, ಅನಂತÀ ಘೋಟ್ನೇಕರ, ಗಣಪತಿ ಕರಂಜೆಕರ, ಪ್ರಕಾಶ ಫಾಕ್ರಿ ತಾಲೂಕಿನ ವಿವಿಧ ಗ್ರಾಮದ ರೈತರು ಇದ್ದರು.
Leave a Comment